ಬೆಂಗಳೂರು: ಸ್ನೇಹಿತನ ಹೆಂಡತಿಯ ಮೇಲಿನ ಸಿಟ್ಟಿಗೆ ಆಕೆಯ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ (Murder) ಮಾಡಿದ ಪ್ರಕರಣ ವೈಟ್ ಫೀಲ್ಡ್ ಪೊಲೀಸ್ ಠಾಣೆ (Whitefield Police Station) ವ್ಯಾಪ್ತಿಯ ನಲ್ಲೂರುಹಳ್ಳಿಯಲ್ಲಿ ನಡೆದಿದೆ.
ಹತ್ಯೆಯಾದ ಬಾಲಕಿಯನ್ನು ಶನಾದ್ (6) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಯೂಸಫ್ ಎಂದು ಗುರುತಿಸಲಾಗಿದೆ. ಆರೋಪಿ, ಬಾಲಕಿಯ ತಾಯಿಯ ಮೇಲಿನ ದ್ವೇಷಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪ್ರೀತಿಸುವಂತೆ ಪಾಗಲ್ ಪ್ರೇಮಿ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ
ಯೂಸಫ್ ಹಾಗೂ ಮಗುವಿನ ತಂದೆ ಇಜಾಮುಲ್ ಶೇಖ್ ಪಶ್ಚಿಮ ಬಂಗಾಳ ಮೂಲದವರು. ಬೆಂಗಳೂರಿಗೆ ಕೆಲಸ ಅರಸಿ ಬಂದು ವೈಟ್ ಫೀಲ್ಡ್‌ನ ನಲ್ಲೂರುಹಳ್ಳಿಯಲ್ಲಿ ಅಕ್ಕಪಕ್ಕವೇ ಮನೆ ಮಾಡಿಕೊಂಡು ವಾಸವಿದ್ದರು. ಆಗಾಗ ಆರೋಪಿ ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದ. ಈ ವೇಳೆ ಸ್ನೇಹಿತನ ಪತ್ನಿ ಜೊತೆ ಆರೋಪಿ ಗಲಾಟೆ ಮಾಡಿಕೊಂಡಿದ್ದ ಇದೇ ಕಾರಣಕ್ಕೆ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಯೂಸೂಫ್ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಪರಿಚಯ ಇದ್ದಿದ್ದರಿಂದ ಬಾಲಕಿ, ಕರೆದಾಗ ಕೊಲೆಗಾರನ ಹಿಂದೆ ಹೆಜ್ಜೆ ಹಾಕಿದ್ದಳು. ಹೀಗೆ ಕರೆದೊಯ್ದವನೇ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತದೇಹವನ್ನ ಚರಂಡಿಗೆ ಬಿಸಾಡಿ ಬಂದಿದ್ದಾನೆ. ಇತ್ತ ಮಗು ಕಾಣದೇ ಇದ್ದಾಗ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹುಡುಕಾಟ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿತ್ತು.
ಪೋಷಕರ ದೂರಿನ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಗುವಿನ ಮೇಲೆ ದೌರ್ಜನ್ಯ ಎಸಗಿದ್ದಾನ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕಾಲಕ್ಕೆ ಮದುವೆ ಮಾಡ್ಲಿಲ್ಲ ಅಂತ ತಂದೆಯನ್ನೇ ಕೊಂದ ಮಗ

