ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆದ ಗೋಲ್ಡ್ ಕೋಸ್ಟ್‌ನ ಪ್ರೀಮಿಯರ್ ಲೀಗ್‌ನಲ್ಲಿ (Gold Coast’s Premier League) 3ನೇ ಡಿವಿಷನ್ ಕ್ಲಬ್ ಕ್ರಿಕೆಟಿಗನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್ ಕಿತ್ತು ಹಲವು ದಾಖಲೆಗಳನ್ನ ಉಡೀಸ್ ಮಾಡಿದ್ದಾರೆ.
3ನೇ ಡಿವಿಷನ್ ಕ್ಲಬ್ ಕ್ರಿಕೆಟಿಗ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನ ನಾಯಕ ಗರೆಥ್ ಮಾರ್ಗನ್ 6 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಗೋಲ್ಡ್ ಕೋಸ್ಟ್ ಲೀಗ್‌ನಲ್ಲಿ ಸರ್ಫರ್ಸ್ ಪ್ಯಾರಡೈಸ್ ಸಿಸಿ (Surfers Paradise CC) ವಿರುದ್ಧ ನಡೆದ ಪಂದ್ಯದಲ್ಲಿ ಡಿಸ್ಟ್ರಿಕ್ ಕ್ರಿಕೆಟ್ ಕ್ಲಬ್ ರೋಚಕ 4 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್ ದಾಖಲೆ ಸರಿಗಟ್ಟಿದ ಚೇಸ್ ಮಾಸ್ಟರ್
Advertisement
Advertisement
40 ಓವರ್‌ಗಳ ಪಂದ್ಯ ಇದಾಗಿತ್ತು. ಎದುರಾಳಿ ತಂಡ ನೀಡಿದ 178 ರನ್‌ಗಳ ಗುರಿ ಬೆನ್ನತ್ತಿದ್ದ ಪ್ಯಾರಡೈಸ್ ಸಿಸಿ 39 ಓವರ್‌ಗಳಲ್ಲಿ 174 ರನ್ ಕಲೆಹಾಕಿ, 4 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 4 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದ ಮಾರ್ಗನ್ ಒಂದೇ ಓವರ್‌ನಲ್ಲಿ 6 ವಿಕೆಟ್‌ಗಳನ್ನ ಕಬಳಿಸಿದರು. ಈ ಮೂಲಕ ತಂಡಕ್ಕೆ ನಾಲ್ಕು ರನ್‌ಗಳ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
Advertisement
Advertisement
ಮಾರ್ಗನ್ ಅವರ ಸ್ಪಿನ್ ದಾಳಿಯಲ್ಲಿ ನಾಲ್ಕು ಮಂದಿ ಕ್ಯಾಚ್ ನೀಡಿದರೆ, ಇಬ್ಬರು ಕ್ಲೀನ್ ಬೌಲ್ಡ್ ಆದರು. ಈ ಪಂದ್ಯದಲ್ಲಿ ಒಟ್ಟು ಐವರು ಆಟಗಾರರು ಗೋಲ್ಡನ್ ಡಕ್‌ಗೆ ತುತ್ತಾದರು. ಅಲ್ಲದೇ ಮಾರ್ಗನ್ ಬ್ಯಾಟಿಂಗ್‌ನಲ್ಲೂ 39 ರನ್ ಬಾರಿಸಿದ್ದರು. ಇದನ್ನೂ ಓದಿ: ಕೊಹ್ಲಿ ಬಗ್ಗೆ ನಾನು ಹಾಗೆ ಮಾತಾಡಬಾರದಿತ್ತು – ಕ್ಷಮೆ ಯಾಚಿಸಿದ ಮೆಂಡಿಸ್
ಆಸ್ಟ್ರೇಲಿಯಾ ಕ್ರಿಕೆಟ್ ಕ್ಲಬ್ ಮಾಹಿತಿ ಪ್ರಕಾರ, ಇದುವರೆಗೆ ಒಂದೇ ಓವರ್‌ನಲ್ಲಿ ಅತಿಹೆಚ್ಚು ವಿಕೆಟ್ ಆಗಿದ್ದು ಎಂದರೆ 5 ಮಾತ್ರ. 2011 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಒಟಾಗೋ ವಿರುದ್ಧದ ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, 2013ರಲ್ಲಿ ಯುಸಿಬಿ-ಬಿಸಿಬಿ ವಿರುದ್ಧ ಬಾಂಗ್ಲಾದೇಶದ ಅಲ್-ಅಮಿನ್ ಹೊಸೈನ್ ಮತ್ತು 2019ರಲ್ಲಿ ಭಾರತದ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆದ್ರೆ ಮಾರ್ಗನ್ ಇವರೆಲ್ಲರ ದಾಖಲೆಯನ್ನ ಚಿಂದಿ ಮಾಡಿದ್ದಾರೆ.