ಬೆಂಗಳೂರು: ಬೆಡ್‍ಶೀಟ್ ಹೊತ್ತು ಬಂದ ಆರು ಮಂದಿ ಕಳ್ಳಿಯರು, ಶೆಟರ್ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿರೋ ಘಟನೆ ಬೆಂಗಳೂರಿನ ಚಿಕ್ಕಪೇಟೆಯ ಭೈರಪ್ಪ ಅಂಡ್ ಸನ್ಸ್ ಸಿಲ್ಕ್ಸ್ ಮಳಿಗೆಯಲ್ಲಿ ನಡೆದಿದೆ.
ಜನವರಿ 2ರಂದು ಚಿಕ್ಕಪೇಟೆಯ ಭೈರಪ್ಪ ಅಂಡ್ ಸನ್ಸ್ ಸಿಲ್ಕ್ ಮಳಿಗೆಯಲ್ಲಿ ಖತರ್ನಾಕ್ ಕಳ್ಳಿಯರು ತಮ್ಮ ಕೈಚಳಕ ತೋರಿದ್ದಾರೆ. ಕಳ್ಳತನದ ದೃಶ್ಯಾವಳಿಗಳು ಮಳಿಗೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 5.30ಕ್ಕೆ ಮಳಿಗೆ ಮುಂದೆ ಆರು ಮಂದಿ ಕಳ್ಳಿಯರು ಮತ್ತು ಒಬ್ಬ ಬಾಲಕ ಬೆಡ್‍ಶೀಟ್ ಹೊದ್ದು ಬಂದಿದ್ದಾರೆ. ಬಳಿಕ ಯಾರಿಗೂ ಕಾಣಬಾರದೆಂದು ಬೆಡ್‍ಶೀಟ್ ಅಡ್ಡ ಹಿಡಿದು ಅಂಗಡಿ ಶೆಟರ್‌ನ್ನು ತೆಗೆದು, ಆರಾಮಾಗಿ ಒಬ್ಬ ಕಳ್ಳಿಯನ್ನ ಒಳಗೆ ಕಳಿಸಿ, ಆಕೆ ಕೈಯಿಂದ ಕಳ್ಳತನ ಮಾಡಿಸಿದ್ದಾರೆ.
ಒಳಗೆ ಬಂದ ಕಳ್ಳಿ, ಸ್ಕ್ರೂ ಡ್ರೈವರ್ ನಿಂದ ಕ್ಯಾಶ್ ಬಾಕ್ಸ್ ತೆಗೆದು ಡ್ರಾವರ್‌ನಲ್ಲಿದ್ದ ಬರೋಬ್ಬರಿ 4.20 ಲಕ್ಷ ರೂ. ಹಣವನ್ನು ಎತ್ತಿಕೊಂಡು ಹೊರಗೆ ಬರೋ ಮುನ್ನ ಶೆಟರ್ ಬಡಿದಿದ್ದಾಳೆ. ನಂತರ ಹೊರಗಿದ್ದವರು ಪುನಃ ಶೆಟರ್ ಮೇಲೆತ್ತಿ ಒಳಗಿನಿಂದ ಬರೋದಕ್ಕೆ ಸಹಾಯ ಮಾಡಿದ್ದಾರೆ. ಒಳಗೆ ಹೋಗಿ ಒಬ್ಬಳು ಕಳ್ಳತನ ಮಾಡ್ತಿದ್ರೆ ಇನ್ನುಳಿದವರು ಚಳಿಗೆ ಕೂತಿದ್ದಾರೆನೋ ಅನ್ನೋ ರೀತಿ ನಟಿಸ್ತಿರ್ತಾರೆ. ಆ ಮೇಲೆ ಎಲ್ಲರೂ ಬೆಡ್‍ಶೀಟ್ ಹೊದ್ದುಕೊಂಡೇ ಏನೂ ತಿಳಿಯದವರ ರೀತಿ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಈ ಬಗ್ಗೆ ಅಂಗಡಿ ಮಾಲೀಕ ಭೈರೇಶ್ ಅವರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳಿಯರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
https://www.youtube.com/watch?v=jlk-Jc9f_JU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv