ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಬಾರದೆಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಪಡ್ಡೆ ಹುಡುಗರ ಬೈಕ್ ವ್ಹೀಲಿಂಗ್ ಕ್ರೇಜ್ ಮಾತ್ರ ನಿಂತಿಲ್ಲ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಇದೀಗ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಎಚ್ಚರ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಗೆ ಹಾಕಿದ್ರೆ ಬಂಧಿಸ್ತಾರೆ ಪೊಲೀಸ್ರು!
Advertisement
ರಾತ್ರಿ ವೇಳೆ ನೈಸ್ ರೋಡ್ ಮತ್ತು ಮೈಸೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ಯುವಕರನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಯುವಕರಿಂದ ಬೈಕ್ ಗಳನ್ನು ಕೂಡ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!
Advertisement
Advertisement
ಬೆಂಗಳೂರು ಸಂಚಾರಿ ಪೊಲೀಸರು ವ್ಹೀಲಿಂಗ್ ಗೆ ಬ್ರೇಕ್ ಹಾಕಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು. ಇತ್ತೀಚೆಗೆ ಏರ್ ಪೋರ್ಟ್ ರೋಡಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋ ಮಾಡಿ ಬಳಿಕ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಅಸಾಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv