-ಕೊರೊನಾಗೆ ಇಬ್ಬರು ಬಲಿ
ಬೆಂಗಳೂರು: ಇಂದು ಆರು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆಯಾಗಿದೆ.
ಮೈಸೂರಿನಲ್ಲಿ 4, ದಕ್ಷಿಣ ಕನ್ನಡದಲ್ಲಿ ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನ 65 ವರ್ಷದ ಮಹಿಳೆ ಮತ್ತು ದಕ್ಷಿಣ ಕನ್ನಡದ 50 ವರ್ಷದ ಮಹಿಳೆ ಕೊರೊನಾಗೆ ಇಂದು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
Advertisement
Advertisement
ಸೋಂಕಿತರ ವಿವರ:
1. ರೋಗಿ- 385: 46 ವರ್ಷದ ಪುರುಷ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
2. ರೋಗಿ- 386: 20 ವರ್ಷದ ಯುವಕ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
3. ರೋಗಿ- 387: 39 ವರ್ಷದ ಪುರುಷ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 52ರ ದ್ವಿತೀಯ ಸಂಪರ್ಕ.
4. ರೋಗಿ- 388: 23 ವರ್ಷದ ಯುವತಿ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 319ರ ಸಂಪರ್ಕ.
5. ರೋಗಿ- 389: 30 ವರ್ಷದ ಮಹಿಳೆ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ. ರೋಗಿ ನಂಬರ್ 325ರ ಪತ್ನಿ
6. ರೋಗಿ- 390: 50 ವರ್ಷದ ಮಹಿಳೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ್ ಕಸಬ ನಿವಾಸಿ, ತೀವ್ರ ಉಸಿರಾಟದ ತೊಂದರೆ.
Advertisement
EVENING UPDATE: 6 new positive cases reported in Karnataka. Till now, there are 390 positive cases including 111 discharges and 16 deaths: Dept of Health, Government of Karnataka #CoronaVirus #karnatakalockdown @DHFWKA pic.twitter.com/Qo9EEGiJXE
— PublicTV (@publictvnews) April 19, 2020
Advertisement
ರೋಗಿ ನಂಬರ್ 281 ಮಹಿಳೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ರೋಗಿ ನಂಬರ್ 390, 50 ವರ್ಷದ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ್ ನಿವಾಸಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.