ಪರೀಕ್ಷೆ ಬರೆಯಲು ಬಂದ 8 ನಕಲಿ ವಿದ್ಯಾರ್ಥಿಗಳು ಪೊಲೀಸರ ವಶ

Public TV
1 Min Read
SSCL STUDENT CHIKKODI 4

ಚಿಕ್ಕೋಡಿ: SSLC ಪರೀಕ್ಷೆ ಬರೆಯಲು ಬಂದ 8 ನಕಲಿ ವಿದ್ಯಾರ್ಥಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

SSCL STUDENT CHIKKODI 3

ರಾಹುಲ್ ಕಿಳ್ಳಿಕೇತರ, ಭೀಮಶಿ ಹುಲಕುಂದ, ಕಾರ್ತಿಕ್ ಲಚ್ಚಪ್ಪ ಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ, ಸವೀತಾ ಮಾದೇವ ಹೊಸೂರು, ಬೀರಪ್ಪಾ ಪುಗತಿ, ಸಾಗರ ಕರಲಿಂಗನವರ ಸಿಕ್ಕಿ ಬಿದ್ದ ವಿದ್ಯಾರ್ಥಿಗಳು. ಅಸಲಿ ಅಭ್ಯರ್ಥಿಗಳ ಬದಲು ಪರೀಕ್ಷೆಗೆ 8 ನಕಲಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಏಳು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ

SSCL STUDENT CHIKKODI 2

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಇವರು ಅಸಲಿ ವಿದ್ಯಾರ್ಥಿಗಳ ಬದಲಾಗಿ ಪರೀಕ್ಷೆ ಬರೆಯಲು ಬಂದಿದ್ದಾರೆ ಎಂಬುದು ತಿಳಿದುಬಂದಿದೆ. ಆಗ ನಕಲಿ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿ ಹಾಲ್ ಟಿಕೇಟ್ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜಿನಲ್ಲಿ ನಡೆದಿದೆ.

SSCL STUDENT CHIKKODI

ವಿದ್ಯಾರ್ಥಿಗಳು ಎಕ್ಸಟರ್ನಲ್ ಬಾಹ್ಯ ಎಸ್‍ಎಸ್‍ಎಲ್‍ಸಿ ಪರಿಕ್ಷೆಗೆ ಬಂದಿದ್ದರು. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿದ್ದು, ವಿದ್ಯಾರ್ಥಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ

Share This Article
Leave a Comment

Leave a Reply

Your email address will not be published. Required fields are marked *