ರಾಯ್ಪುರ: ಛತ್ತೀಸ್‍ಗಢದ ಭಿಲಾಯಿನಲ್ಲಿರೋ ಸ್ಟೀಲ್ ತಯಾರಿಕಾ ಘಟಕ(ಉಕ್ಕು ಉತ್ಪಾದಕಾ ಘಟಕ)ದಲ್ಲಿ ಅನಿಲ ಪೈಪ್ ಸ್ಫೋಟಗೊಂಡ ಪರಿಣಾಮ 6 ಮಂದಿ ಸಜೀವ ದಹನವಾದ ಘಟನೆ ನಡೆದಿದೆ.
Advertisement
ಈ ಘಟನೆ ಇಂದು ಮಧ್ಯಾಹ್ನ ರಾಜಧಾನಿ ರಾಯ್ ಪುರದಿಂದ 30 ಕಿಮೀ ದೂರದಲ್ಲಿ ನಡೆದಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಕೋಕ್ ಓವನ್ ಸ್ಟೇಷನ್ ಬಳಿ ಇರುವ ಪೈಪ್ ಲೈನ್ ನಲ್ಲಿ ಈ ಸ್ಫೋಟ ಸಂಭವಿಸಿದೆ ಅಂತ ಪೊಲೀಸರು ಹೇಳಿದ್ದಾರೆ.
Advertisement
Chhattisgarh: Visuals from outside a hospital in Bhilai; 6 people have died and 14 injured in a gas pipeline blast in Bhilai Steel Plant. pic.twitter.com/aQGFNr3LIg
— ANI (@ANI) October 9, 2018
Advertisement
ಘಟನೆಯ ಮಾಹಿತಿ ಪಡೆದ ಕೂಡಲೇ ಪೊಲೀಸರು ಹಾಗೂ ರಕ್ಷಣಾ ತಂಡ ದೌಡಾಯಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
Advertisement
ಸರಿ ಸುಮಾರು 6 ಮಂದಿ ಘಟನೆಯಿಂದಾಗಿ ಸಜೀವ ದಹನವಾಗಿದ್ದಾರೆ. ಇನ್ನು 14 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಅಂತ ಪೊಲೀಸ್ ಇನ್ಸ್ ಪೆಕ್ಟರ್ ಜಿಪಿ ಸಿಂಗ್ ತಿಳಿಸಿದ್ದಾರೆ.
Chhattisgarh: 6 dead and 14 injured in a gas pipeline blast in Bhilai Steel Plant. More details awaited.
— ANI (@ANI) October 9, 2018
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಉಕ್ಕಿನ ಘಟಕ ಇದಾಗಿದ್ದು, ಭಾರತದಲ್ಲೇ ಅತಿ ದೊಡ್ಡ ಉಕ್ಕಿನ ಘಟಕ ಎಂದೇ ಹೆಸರು ಪಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv