ತೈಪೆ: ತೈವಾನ್‌ನ (Taiwan) ಆಗ್ನೇಯ ಭಾಗದಲ್ಲಿ ಭಾನುವಾರ 6.8 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ. ದ್ವೀಪ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪ ಸುನಾಮಿ (Tsunami) ಎಚ್ಚರಿಕೆಯನ್ನು ಹುಟ್ಟುಹಾಕಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕದ ಭೂವೈಜ್ಞಾನಿಕ ಸಂಸ್ಥೆ ತೈವಾನ್‌ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಹಾಗೂ 10 ಕಿ.ಮೀ(6.21 ಮೈಲಿ) ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಗುರುತಿಸಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು
Advertisement
Advertisement
ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು 300 ಕಿ.ಮೀ ಆಳದಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಮೆರಿಕದ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ.
Advertisement
ಭೂಕಂಪದಿಂದಾಗಿ ಕೆಲವೆಡೆ ಕಟ್ಟಡಗಳು ಕುಸಿತವಾಗಿರುವುದಾಗಿ ವರದಿಯಾಗಿದೆ. ಪೂರ್ವ ಕರಾವಳಿ ಭಾಗದ ರೈಲ್ವೇ ನಿಲ್ದಾಣದಲ್ಲಿ ರೈಲೊಂದು ಹಳಿ ತಪ್ಪಿದ್ದಾಗಿ ತಿಳಿದುಬಂದಿದೆ. ಇಲ್ಲಿಯವರೆಗೆ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ವಿದ್ಯಾರ್ಥಿನಿ ತನ್ನ ಖಾಸಗಿ ವೀಡಿಯೋ ಮಾತ್ರ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ಲು – ವಿವಿ ಸ್ಪಷ್ಟನೆ
Advertisement
ತೈವಾನ್‌ನ ಭೂಕಂಪದ ಬಳಿಕ ಜಪಾನ್‌ನ ಒಕಿನಾವಾ ಪ್ರಾಂತ್ಯದ ಭಾಗದಲ್ಲಿ 1 ಮೀ. ಎತ್ತರದ ಸುನಾಮಿ ಅಲೆಗಳ ಬಗ್ಗೆ ಅಲ್ಲಿನ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.