ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ ತೀರದಲ್ಲಿ ಮಹಾ ಕುಂಭಮೇಳದ (Mahakumbh 2025) ಮೂರನೇ ದಿನವೂ ಭಕ್ತಸಾಗರ (Devotees) ತುಂಬಿ ತುಳುಕಿದೆ.
ಈವರೆಗೂ ಆರೂವರೆ ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ (Holy bath) ಮಾಡಿದ್ದಾರೆ. ಮೊದಲ ದಿನ 1.75 ಕೋಟಿ ಮಂದಿ, 2ನೇ ದಿನ 3.50 ಕೋಟಿ ಮಂದಿ, ಮೂರನೇ ದಿನವಾದ ಇಂದು ಕೂಡ 1 ಕೋಟಿಗೂ ಹೆಚ್ಚು ಮಂದಿ ಕೊರೆವ ಚಳಿ ಲೆಕ್ಕಿಸದೇ ಅಮೃತ ಸ್ನಾನದಲ್ಲಿ ತೊಡಗಿದ್ದು ಕಂಡುಬಂತು.
ಮಹಾಕುಂಭಮೇಳದಲ್ಲಿ ಪಾಲ್ಗೊಂಡಿರುವ ವಿದೇಶಿ ಭಕ್ತೆಯೊಬ್ಬರು, ಮಡಿಲಲ್ಲಿ ಗಣೇಶನ ವಿಗ್ರಹವನ್ನು ಹೊಂದಿರುವ ಫೋಟೋ ವೈರಲ್ ಆಗಿದೆ. ಬ್ಯೂಟಿ ಆಫ್ ಸನಾತನ್, ಜೈ ಗಣೇಶ್ ಎಂಬ ಕಾಮೆಂಟ್‌ಗಳು ಹೊರಹೊಮ್ಮಿದೆ. ಇನ್ನೂ 2ನೇ ದಿನ ಅಸ್ವಸ್ಥಗೊಂಡಿದ್ದ ಸ್ಟೀವ್ ಜಾಬ್ಸ್ ಪತ್ನಿ ಕಮಲಾ ಚೇತರಿಸಿಕೊಂಡಿದ್ದು, ಗಂಗೆಯಲ್ಲಿ ಮಿಂದೆದ್ದಿದ್ದಾರೆ ಎಂದು ಯುಪಿ ಆಡಳಿತ ತಿಳಿಸಿದೆ.