6.47 ಕೋಟಿ ರೂ. ಮೌಲ್ಯದ 4.28 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

Public TV
2 Min Read
BENGALURU 1

ಬೆಂಗಳೂರು: ನಗರ ಜಿಲ್ಲೆಯ 5 ತಾಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

BENGALURU

ಬೆಂಗಳೂರು ನಗರ ಜಿಲ್ಲೆಯಲ್ಲಿ 0.11 ವಿಸ್ತೀರ್ಣದ ಒಟ್ಟು ಎರಡು ಸರ್ಕಾರಿ ಕೆರೆಗಳು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 55 ಲಕ್ಷ ರೂ. ಮೌಲ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ 0.06 ವಿಸ್ತೀರ್ಣದ 30 ಲಕ್ಷ ರೂ. ಹಾಗೂ ಅನೇಕಲ್ ತಾಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮದ 0.05 ವಿಸ್ತೀರ್ಣದ 25 ಲಕ್ಷ ರೂ. ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಸಿಎಂ ದಾವೋಸ್ ಪ್ರವಾಸ ನಾಳೆ ನಿರ್ಧಾರ: ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ಸಂದೇಶ

ಬೆಂಗಳೂರು ನಗರ ಜಿಲ್ಲೆಯಲ್ಲಿ 1.35 ವಿಸ್ತೀರ್ಣದ ಒಟ್ಟು ಎರಡು ನಕಾಶೆ ದಾರಿ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 95 ಲಕ್ಷ ರೂ. ಮೌಲ್ಯವಾಗಿದೆ. ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಗೆರೆಟಗನಬೆಲೆ ಗ್ರಾಮದ 1-20 ವಿಸ್ತೀರ್ಣದ ರೂ.75 ಲಕ್ಷ ಹಾಗೂ ಅತ್ತಿಬೆಲೆ ಹೋಬಳಿಯ ಕೂಡ್ಲೀಪುರ ಗ್ರಾಮದ 0-15 ವಿಸ್ತೀರ್ಣದ 20 ಲಕ್ಷ ರೂ. ಮೌಲ್ಯದ ನಕಾಶೆ ದಾರಿ ಒತ್ತುವರಿ ಮಾಡಿ ತೆರವು ಮಾಡಲಾಗಿದೆ.

FotoJet 14 4

ಯಲಹಂಕ ತಾಲೂಕಿನ ಜಾಲ-1 ಹೋಬಳಿಯ ಹುತ್ತನಹಳ್ಳಿ ಗ್ರಾಮದ 2.00 ವಿಸ್ತೀರ್ಣದ ಸರ್ಕಾರಿ ಗೋಮಾಳ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 380 ಲಕ್ಷ ರೂ. ಮೌಲ್ಯದ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ನ್ಯಾನಪನಹಳ್ಳಿ ಗ್ರಾಮದ 0-00.08 ವಿಸ್ತೀರ್ಣದ ಸರ್ಕಾರಿ ಗುಂಡುತೋಪು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 2.19 ಲಕ್ಷ ರೂ. ಮೌಲ್ಯದ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ನೆಲಕ್ಕೆ ಅಪ್ಪಳಿಸಿದ ಲೋಹದ ಚೆಂಡುಗಳು – ಮೂರು ಗ್ರಾಮದಲ್ಲಿ ಕಂಪನ

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ದೊಡ್ಡತಿಮ್ಮಸಂದ್ರ ಗ್ರಾಮದ 0-19 ವಿಸ್ತೀರ್ಣದ 100.00 ಲಕ್ಷ ರೂ. ಮೌಲ್ಯದ ಹಾಗೂ ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದ 0-02 ವಿಸ್ತೀರ್ಣದ 15 ಲಕ್ಷ ರೂ. ಮೌಲ್ಯದ ಸರ್ಕಾರಿ ಖರಾಬು ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. ಒಟ್ಟು 6,47,19,000 ಮೌಲ್ಯದ 4.28 ಎ/ಗು ವಿಸ್ತೀರ್ಣದ ಕೆರೆ, ಸರ್ಕಾರಿ ಗೋಮಾಳ, ಗುಂಡು ತೋಪು ಹಾಗೂ ಸರ್ಕಾರಿ ಖರಾಬು ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *