ಟೆಹ್ರಾನ್: ದಕ್ಷಿಣ ಇರಾನ್‍ನಲ್ಲಿ ನಡೆದ ಪ್ರಬಲ ಭೂಕಂಪನದಲ್ಲಿ ಮೂವರು ಸಾವನ್ನಪ್ಪಿದ್ದು, 16 ಮಂದಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ. ದುಬೈನ ಬಹ್ರೇನ್, ಕತಾರ್‌ನಲ್ಲಿ ಭೂಕಂಪನದ ಅನುಭವವಾಗಿದೆ. ಕಂಪನದ ಅನುಭವ ಎಷ್ಟಿತೆಂದರೆ ಮನೆಯಲ್ಲಿನ ವಸ್ತುಗಳ ಅಲುಗಾಡಿವೆ.
Advertisement
Advertisement
ಕುರ್ಚಿ, ಫ್ಯಾನ್, ಪಾತ್ರೆಗಳು ಅಲುಗಾಡುತ್ತಿದ್ದಂತೆ ಜನ ಭಯಭೀತರಾಗಿ ಮನೆಯಿಂದ ಓಡಿ ಹೋಗಿದ್ದಾರೆ. ಕಟ್ಟಡಗಳು ನೆಲಸಮವಾಗಿವೆ. ಸದ್ಯಕ್ಕೆ ಮೂವರು ಸಾವನ್ನಪ್ಪಿದ್ದು, ಭಾರೀ ಸಾವು-ನೋವಾಗಿರುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಜುಲೈ 5ರವರೆಗೆ ಭಾರೀ ಮಳೆ – ಕರಾವಳಿಯಲ್ಲಿ ಆರೆಂಜ್, ಬೆಂಗ್ಳೂರಲ್ಲಿ ಯೆಲ್ಲೋ ಅಲರ್ಟ್
Advertisement
ಕಳೆದ ವರ್ಷ ನವೆಂಬರ್‌ನಲ್ಲಿ ಹಾರ್ಮೋಜ್‍ಗಾನ್ ಪ್ರಾಂತ್ಯದಲ್ಲಿ 6.4 ಮತ್ತು 6.3 ತೀವ್ರತೆಯ ಅವಳಿ ಭೂಕಂಪಗಳು ಸಂಭವಿಸಿದಾಗ ಒಬ್ಬರು ಸಾವನ್ನಪ್ಪಿದ್ದರು. ಹಲವಾರು ಟೆಕ್ಟೋನಿಕ್ ಪ್ಲೇಟ್‍ಗಳ ಅಂಚಿನಲ್ಲಿದೆ ಮತ್ತು ವಿವಿಧ ದೋಷ ರೇಖೆಗಳನ್ನು ದಾಟಿದೆ. ಇರಾನ್ ಪ್ರಬಲ ಭೂಕಂಪನ ಚಟುವಟಿಕೆಯ ಪ್ರದೇಶವಾಗಿದೆ. ಇದನ್ನೂ ಓದಿ: ಮಸೀದಿಯಲ್ಲಿ ವಿದ್ಯುತ್ ಕಡಿತ- ಗಲಾಟೆಯಲ್ಲಿ ಇಬ್ಬರು ಸಾವು