ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ವಾಯುವ್ಯ ಬುಡಕಟ್ಟು ಜಿಲ್ಲೆಗಳಲ್ಲಿ ಮಸೀದಿಯೊಂದರಲ್ಲಿ ವಿದ್ಯುತ್ ಕಡಿತದ ಬಗ್ಗೆ ನಡೆದ ವಾದ ತೀವ್ರಗೊಂಡು ಗುಂಡಿನ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಶ್ರೀಲಂಕಾ ಹಾದಿಯಲ್ಲೇ ಸಾಗುತ್ತಿರುವ ಪಾಕಿಸ್ತಾನ ಇದೀಗ ತನ್ನ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಲೋಡ್ ಶೆಡ್ಡಿಂಗ್ ಕೊರತೆಯಿಂದಾಗಿ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬೆನ್ನಲ್ಲೇ ಮೊಬೈಲ್ ಬಳಕೆ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಗಲಾಟೆ ನಡೆದಿದೆ.
Advertisement
Advertisement
ಲಕ್ಕಿ ಮಾರ್ವತ್ ಜಿಲ್ಲೆಯ ಐಸಾಕ್ ಖೇಲ್ ಪ್ರದೇಶದ ಮಸೀದಿಯಲ್ಲಿ ನಡೆದ ಪ್ರಾರ್ಥನೆಯ ನಂತರ ಆರಾಧಕರ ಗುಂಪು ತಮ್ಮ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಿರುವುದಕ್ಕೆ ಬಗ್ಗೆ ತೀವ್ರ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡರು. ಇದನ್ನೂ ಓದಿ: ಪಾಕ್‌ನಲ್ಲಿ ಮೊಬೈಲ್, ಇಂಟರ್‌ನೆಟ್ ಸೇವೆ ಶೀಘ್ರವೇ ಸ್ಥಗಿತ!
Advertisement
Advertisement
ಘರ್ಷಣೆ ಶೀಘ್ರದಲ್ಲೇ ಹಿಂಸಾಚಾರಕ್ಕೆ ತಿರುಗಿತ್ತು. ಕೆಲವು ಆರಾಧಕರು ಗುಂಡಿನ ಚಕಮಕಿ ನಡೆಸಿದರು. ಈ ಅತಿರೇಕಗೊಂಡು ಇಬ್ಬರನ್ನು ಹತ್ಯೆ ಮಾಡಿದ್ದಾರೆ ಹಾಗೂ ಆರು ವರ್ಷದ ಮಗು ಸೇರಿದಂತೆ 11 ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್