ಚೆನ್ನೈ: ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಶ್ವಿನ್ ಆರು ವಿಕೆಟ್ ಕಿತ್ತು ಮಿಂಚಿದ್ದಾರೆ. ಆದರೆ ಈ ಪಂದ್ಯ ಗೆಲ್ಲಬೇಕಾದರೆ ಭಾರತ 420 ರನ್‍ಗಳ ಕಠಿಣ ಗುರಿಯನ್ನು ಪಡೆದಿದೆ.
Advertisement
ಮೂರನೇ ದಿನದಾಟ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 257 ರನ್‍ಗಳಿಸಿದ್ದ ಭಾರತ ನಾಲ್ಕನೇ ದಿನ 337 ರನ್‍ಗಳಿಸಿ ಸರ್ವಪತನ ಕಂಡಿತು. ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ 85 ರನ್ (138 ಬಾಲ್, 12 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತಕ್ಕೆ ಮತ್ತೊಮ್ಮೆ ಆಸರೆಯಾದರು.
Advertisement
Advertisement
241 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಅಶ್ವಿನ್ ಅವರ ಬಿಗುವಿನ ದಾಳಿಗೆ ತತ್ತರಿಸಿ ಕೇವಲ 178 ರನ್‍ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡಕ್ಕೆ 420 ರನ್‍ಗಳ ಗುರಿ ನೀಡಿದೆ.
Advertisement
It's Stumps on Day 4 of the first @Paytm #INDvENG Test!
@RealShubmanGill 1⃣5⃣*@cheteshwar1 1⃣2⃣*
Jack Leach 1/21
Join us for an action-packed Day 5 tomorrow!
Scorecard ???? https://t.co/VJF6Q62aTS pic.twitter.com/loYkQIvmhY
— BCCI (@BCCI) February 8, 2021
ಭಾರತದ ಪರವಾಗಿ ಮಾರಕ ದಾಳಿ ನಡೆಸಿದ ಅಶ್ವಿನ್ 17.3 ಓವರ್ ಎಸೆದು 61 ರನ್ ನೀಡಿ 6 ವಿಕೆಟ್ ಪಡೆದರೆ, ಶಜಾದ್ ನದೀಂ 2 ವಿಕೆಟ್ ಕಿತ್ತು ಮಿಂಚಿದರು. ಬುಮ್ರಾ ಮತ್ತು ಇಶಾಂತ್ ಶರ್ಮಾ ತಲಾ 1 ವಿಕೆಟ್ ಕಿತ್ತರು.
A bowling spell to cherish for @ashwinravi99 at his home ground.#INDvENG pic.twitter.com/1j9tmXmPYw
— BCCI (@BCCI) February 8, 2021
ಇಂಗ್ಲೆಂಡ್‍ನ ಬೃಹತ್ ಟಾರ್ಗೆಟ್‍ನ್ನು ಚೇಸ್ ಮಾಡಲು ಹೊರಟ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕೇವಲ 12ರನ್ (20 ಬಾಲ್, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 39 ರನ್‍ಗೆ 1 ವಿಕೆಟ್ ಕಳೆದುಕೊಂಡಿದೆ. ಶುಭ್‍ಮನ್ ಗಿಲ್ 15 ರನ್ (35 ಬಾಲ್,3 ಬೌಂಡರಿ) ಮತ್ತು ಚೇತೇಶ್ವರ ಪೂಜಾರಾ 12 ರನ್ (23 ಬಾಲ್, 1 ಬೌಂಡರಿ) ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಗೆಲ್ಲಲು ಇನ್ನೂ 381 ರನ್‍ಗಳು ಬೇಕಾಗಿದೆ.