ಬೆಂಗಳೂರು: ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ 2023-24ನೇ ಸಾಲಿನ ಕೇಂದ್ರ ಬಜೆಟ್‌ಗೆ (Union Budget) ವೇದಿಕೆ ಸಿದ್ಧವಾಗಿದೆ. ಸಂಸತ್ ಭವನದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆಯುವ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿರುವುದರಿಂದ ಜನರು ಬಹು ನೀರಿಕ್ಷೆಗಳನ್ನು ಹೊಂದಿದ್ದಾರೆ.
ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಬಜೆಟ್ ಮಂಡಣೆ ಮಾಡಲಿದ್ದು, 2023ರ ಏಪ್ರಿಲ್‌ನಿಂದ ಬಜೆಟ್ ಜಾರಿಗೆ ಬರಲಿದೆ. ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಮೇಲೆ ಎಲ್ಲರ ಚಿತ್ತ ಕೇಂದ್ರಿಕೃತವಾಗಿದೆ.
Advertisement
Advertisement
ಮಹಿಳೆಯ ಪರವಾಗಿ ಬಜೆಟ್ ಇರಲಿ:
ಪ್ರತಿಯೊಬ್ಬರ ಅದರಲ್ಲೂ ಮಧ್ಯಮ ವರ್ಗದವರ, ಬಡವರ ಮಾತುಗಳು ಇವು. ಗ್ಯಾಸ್ ಬೆಲೆ 1,100 ರೂ. ಆಗಿದೆ. ಸಬ್ಸಿಡಿ ಎಂದು ಹೇಳಿ ಅದು ಬರುತ್ತಿಲ್ಲ. ಮನೆಗೆ ಬೇಕಾದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಪ್ರತಿನಿತ್ಯದ ಜೀವನಕ್ಕೆ ಸಾವಿರಾರು ರೂ. ಬೇಕಾಗುತ್ತಿದೆ. ಸರ್ಕಾರ ಈ ಬಾರಿಯಾದರೂ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿಸಿ ಎಂಬುದು ಮಹಿಳೆಯರ ನಿರೀಕ್ಷೆಯಾಗಿದೆ.
Advertisement
Advertisement
ಬಡವರ ಪರವಾಗಿ ನಿಲ್ಲಿ, ತೆರಿಗೆ ಕಡಿಮೆ ಮಾಡಿ:
ಬಡವರು, ದಿನಗೂಲಿ ನೌಕರರು ಇಂದಿನ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಆಟೋ ಚಾಲಕರಿಗೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ. ಆಟೋ ಚಾಲಕರನ್ನು ಪರಿಗಣನೆಗೆ ತೆಗೆದುಕೊಂಡು ಬಜೆಟ್ ಮಾಡಿದರೆ ಒಳ್ಳೆಯದು. ಗ್ಯಾಸ್, ಪೆಟ್ರೋಲ್, ಡೀಸೆಲ್ ಎಲ್ಲದರ ಬೆಲೆ ಹೆಚ್ಚಾಗಿದೆ. ಇದಕ್ಕೆ ಬಜೆಟ್‌ನಲ್ಲಿ ಪರಿಹಾರ ಕೊಡಿಸಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಸ್ರೇಲಿನ ಹೈಫಾ ಬಂದರು ಅದಾನಿ ತೆಕ್ಕೆಗೆ
ಮಹಿಳೆಯರ ಶಿಕ್ಷಣ ರಕ್ಷಣೆಗೆ ಒತ್ತು:
ಮಹಿಳೆಯ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡಿ, ಹೆಣ್ಣು ಮಕ್ಕಳ ಶಿಕ್ಷಣವನ್ನು ಉಚಿತವಾಗಿ ನೀಡಿ. ಆಗ ಶೇ.100 ರಷ್ಟು ಸಾಕ್ಷರತೆ ಪ್ರಮಾಣ ಬರಲಿದೆ. ಜೊತೆಗೆ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ. ಇಡೀ ವಿಶ್ವದ ಜನರು ಬೆಂಗಳೂರಿನ ಕಡೆ ಬರುತ್ತಿದ್ದಾರೆ. ಬೇಸಿಕ್ ನೀಡ್ಸ್ ಬಗ್ಗೆ ಗಮನ ಹರಿಸಿ. ಬೆಂಗಳೂರಿನಂತಹ ಮಹಾನಗರದಲ್ಲಿ ದಿನದ 24 ಗಂಟೆ ನೀರು ಮತ್ತು ವಿದ್ಯುತ್ ಸಿಗುವಂತೆ ಮಾಡಿ. ಅಷ್ಟೇ ಅಲ್ಲದೇ ಮಹಿಳೆಯರ ಶಿಕ್ಷಣದ ಜೊತೆಗೆ ಅವರ ಉದ್ಯೋಗಕ್ಕೆ ಮತ್ತು ರಕ್ಷಣೆಗೆ ಸಹಕಾರಿಯಾಗುವಂತೆ ಬಜೆಟ್ ಇರಲಿ ಎನ್ನುವ ಮಾತುಗಳು ಶಿಕ್ಷಣ ವಲಯದಲ್ಲಿ ಕೇಳಿ ಬಂದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ 5ನೇ ಬಜೆಟ್ ಮೇಲೆ ಜನರು ದೊಡ್ಡ ಪ್ರಮಾಣದಲ್ಲಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ಬಜೆಟ್‌ನಲ್ಲಿ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಇದನ್ನೂ ಓದಿ: ಚೀನಾ ಓಲೈಸಲು ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಮಹೇಶ್ ಜೇಠ್ಮಾಲನಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k