ಹೈಫಾ: ಇಸ್ರೇಲಿನ (Israel ) ಎರಡನೇ ಅತಿದೊಡ್ಡ ಹೈಫಾ ಬಂದರನ್ನು ಅದಾನಿ ಸಮೂಹ (Adani Group) 1.2 ಶತಕೋಟಿ ಡಾಲರ್‌ಗೆ ಸ್ವಾಧೀನಪಡಿಸಿದೆ.
ಟೆಲ್ ಅವೀವ್ ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವೂ ಸೇರಿದಂತೆ ಇಸ್ರೇಲ್‌ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಮುಂದಾಗಿದೆ.
Advertisement
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಗೌತಮ್ ಅದಾನಿ (Gautam Adani) ಜೊತೆಯಾಗಿ ಹೈಫಾ ಬಂದರನ್ನು (Haifa Port) ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿ ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.
Advertisement
Privileged to meet with @IsraeliPM @netanyahu on this momentous day as the Port of Haifa is handed over to the Adani Group. The Abraham Accord will be a game changer for the Mediterranean sea logistics. Adani Gadot set to transform Haifa Port into a landmark for all to admire. pic.twitter.com/Cml2t8j1Iv
— Gautam Adani (@gautam_adani) January 31, 2023
Advertisement
ಅದಾನಿ ಗ್ರೂಪ್‌ನೊಂದಿಗಿನ ಹೈಫಾ ಬಂದರು ಒಪ್ಪಂದ ದೊಡ್ಡ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನಿ ನೆತನ್ಯಾಹು (Netanyahu), ಇದು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಹಲವು ವಿಧಗಳಲ್ಲಿ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್
Advertisement
ಕಂಟೈನರ್ ಹಡಗು ವಿಷಯದಲ್ಲಿ ಹೈಫಾ ಬಂದರು ಇಸ್ರೇಲ್‌ನಲ್ಲಿ ಎರಡನೇ ಅತಿದೊಡ್ಡ ಬಂದರಾಗಿದ್ದು ಪ್ರವಾಸಿ ಕ್ರೂಸ್ ಹಡಗುಗಳು ದೊಡ್ಡ ಪ್ರಮಾಣದಲ್ಲಿ ಈ ಬಂದರಿಗೆ ಬರುತ್ತದೆ.
ಇದು ಅಗಾಧವಾದ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. 100 ವರ್ಷಗಳ ಹಿಂದೆ ಮತ್ತು ವಿಶ್ವ ಯುದ್ದದ ಸಮಯದಲ್ಲಿ ಹೈಫಾ ನಗರವನ್ನು ವಿಮೋಚನೆಗೊಳಿಸಲು ಧೈರ್ಯಶಾಲಿ ಭಾರತೀಯ ಸೈನಿಕರು ಸಹಾಯ ಮಾಡಿದರು ಮತ್ತು ಇಂದು, ಇದು ಅತ್ಯಂತ ದೃಢವಾದ ಭಾರತೀಯ ಹೂಡಿಕೆದಾರರು ಹೈಫಾ ಬಂದರು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದು ನೆತನ್ಯಾಹು ಹೇಳಿದರು.
הצטרפו לשידור החי: דברי ראש הממשלה בנימין נתניהו ושרת התחבורה מירי רגב בטקס כניסת חברת א.ד.ג.ד. בע"מ לנמל חיפה https://t.co/2fDAe2PQiN
— ראש ממשלת ישראל (@IsraeliPM_heb) January 31, 2023
ಈ ಒಪ್ಪಂದದ ಜೊತೆಗೆ ಹೈಫಾ ಬಂದರಿನಲ್ಲಿ ಅದಾನಿ ಗ್ರೂಪ್ ರಿಯಲ್ ಎಸ್ಟೇಟ್ ಅಭಿವೃದ್ಧಿ ಪಡಿಸಲಿದೆ. ಇದನ್ನೂ ಓದಿ: ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ
ಅದಾನಿ ಪೋರ್ಟ್ಸ್ & ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಇಸ್ರೇಲಿನ ಸ್ಥಳೀಯ ಕೆಮಿಕಲ್ಸ್ ಮತ್ತು ಲಾಜಿಸ್ಟಿಕ್ಸ್ ಗ್ರೂಪ್ ಗಡೋಟ್ ಸಹಭಾಗಿತ್ವ ಹೊಂದಿದೆ. ಈ ಕಂಪನಿ ಕಳೆದ ಜುಲೈನಲ್ಲಿ ಇಸ್ರೇಲ್‌ನ ಮೆಡಿಟರೇನಿಯನ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಹೈಫಾ ಬಂದರನ್ನು ಅಭಿವೃದ್ಧಿ ಪಡಿಸುವ ಇಸ್ರೇಲ್ ಸರ್ಕಾರದ 1.2 ಶತಕೋಟಿ ಡಾಲರ್ ಟೆಂಡರ್ ಗೆದ್ದುಕೊಂಡಿತ್ತು.
ಕಳೆದ ಆರು ವರ್ಷಗಳಲ್ಲಿ, ಅದಾನಿ ಸಮೂಹವು ಇಸ್ರೇಲಿನ ಎಲ್ಬಿಟ್ ಸಿಸ್ಟಮ್ಸ್, ಇಸ್ರೇಲ್ ವೆಪನ್ ಸಿಸ್ಟಮ್ಸ್ ಮತ್ತು ಇಸ್ರೇಲ್ ಇನ್ನೋವೇಶನ್ ಅಥಾರಿಟಿಯಂತಹ ಕಂಪನಿಗಳೊಂದಿಗೆ ಅನೇಕ ಪಾಲುದಾರಿಕೆಯನ್ನು ಹೊಂದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k