ನವದೆಹಲಿ: ಭಾರತದಲ್ಲಿ 5ಜಿ ತಂತ್ರಜ್ಞಾನ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರ ತಿಳಿಸಿದೆ. ಇದರ ಪ್ರಕಾರ ಭಾರತೀಯರು ಈ ವರ್ಷದ ಕೊನೆಯಲ್ಲಿ 5ಜಿ ನೆಟ್ವರ್ಕ್ ಬಳಸಬಹುದಾಗಿದೆ.
ಇಂಡಿಯಾ ಟೆಲಿಕಾಂ 2022 ಬಿಸಿನೆಸ್ ಎಕ್ಸ್‍ಪೋವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ 5ಜಿ ತಂತ್ರಜ್ಞಾನ ಅಭಿವೃದ್ಧಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಈ ವರ್ಷದ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಟೆಲಿಕಾಂ ಆಪರೇಟರ್‍ಗಳಿಂದ 5ಜಿ ಸೇವೆಗಳನ್ನು ರೋಲ್‍ಔಟ್ ಮಾಡಲು ಅನುಕೂಲವಾಗುವಂತೆ ಮುಂದಿನ ಕೆಲ ತಿಂಗಳಿನಲ್ಲಿ ಅಗತ್ಯವಿರುವ ಸ್ಪೆಕ್ಟ್ರಮ್‍ಗಳನ್ನು ಹರಾಜುಗಳನ್ನು ನಡೆಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಇದನ್ನೂ ಓದಿ: Google Chrome – 8 ವರ್ಷಗಳ ನಂತರ ಹೊಸ ಲೋಗೋ!
Advertisement
ಈ ವರ್ಷದ ಆಗಸ್ಟ್‍ನಲ್ಲಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರ ಬಳಿಕ 5ಜಿ ಸೇವೆ ಲಭ್ಯವಾಗಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದರ ಪ್ರಕಾರ ಈ ವರ್ಷದ ಕೊನೆಯಲ್ಲಿ 5ಜಿ ನೆಟ್ವರ್ಕ್ ಭಾರತದಲ್ಲಿ ಲಭ್ಯವಾಗುವುದನ್ನು ನಾವು ನಿರೀಕ್ಷಿಸಬಹುದು.
Advertisement
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಈಗಾಗಲೇ ದೂರಸಂಪರ್ಕ ಉದ್ಯಮದೊಂದಿಗೆ 5ಜಿ ಜಾರಿ ಬಗ್ಗೆ ಮಾತುಕತೆ ನಡೆಸುತ್ತಿದೆ. ಮಾರ್ಚ್ ಒಳಗಾಗಿ ಅದರ ಬಗ್ಗೆ ವರದಿಯನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನ ಹೊಸ Take a Break ಫೀಚರ್