ನವದೆಹಲಿ: ಭಾರತದ ಅತೀ ದೊಡ್ಡ 5ಜಿ ಸ್ಪೆಕ್ಟ್ರಂ ಹರಾಜು ಮಂಗಳವಾರದಿಂದ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಕ್ಷಣಗಣನೆ ನಡೆಯುತ್ತಿದೆ. ಟೆಲಿಕಾಂ ಕಂಪನಿಗಳು ಈ ಹರಾಜಿನಲ್ಲಿ ಭಾಗವಹಿಸಲು ತಯಾರಾಗಿ ನಿಂತಿವೆ. ಆದರೆ ಈ 5ಜಿ ಯುಗದ ಉಪಯೋಗವೆಷ್ಟು ಎಂಬ ಬಗ್ಗೆ ಪ್ರತಿಯೊಬ್ಬ ಇಂಟರ್‌ನೆಟ್ ಬಳಕೆದಾರ ತಿಳಿದುಕೊಳ್ಳುವುದು ಅತ್ಯಗತ್ಯ.
ಸರ್ಕಾರ ಹಾಗೂ ವಿವಿಧ ಉದ್ಯಮಗಳ ಪ್ರಕಾರ 5ಜಿ ನೆಟ್‌ವರ್ಕ್ ಕಳೆದ 4ಜಿ ನೆಟ್‌ವರ್ಕ್‌ಗಿಂತಲೂ 10 ಪಟ್ಟು ಹಾಗೂ 3ಜಿ ಗಿಂತಲೂ 30 ಪಟ್ಟು ಹೆಚ್ಚು ವೇಗವಾಗಿರುತ್ತದೆ. ಇದು ಇಲ್ಲಿಯವರೆಗೆ ಯಾವುದೇ ನೆಟ್‌ವರ್ಕ್ ನೀಡದ ಹಾಗೂ ಸಮಯ ವ್ಯರ್ಥವಾಗಿಸದ ಅತ್ಯುತ್ತಮ ಅನುಭವ ನೀಡಲಿದೆ.
Advertisement
Advertisement
ಉಳಿದವುಗಳಿಗಿಂತ 5ಜಿ ಎಷ್ಟು ಸ್ಪೀಡ್?
2ಜಿ ನೆಟ್‌ವರ್ಕ್‌ನಲ್ಲಿ ಒಂದು ವೀಡಿಯೋ ಡೌನ್‌ಲೋಡ್ ಆಗಲು 2.8 ದಿನವನ್ನೇ ತೆಗೆದುಕೊಂಡರೆ ಅದೇ ವೀಡಿಯೋ 3ಜಿಯಲ್ಲಿ ಡೌನ್‌ಲೋಡ್ ಆಗಲು 2 ಗಂಟೆ ಬೇಕಾಗುತ್ತದೆ. ಆ ವೀಡಿಯೋ 4ಜಿಯಲ್ಲಿ 40 ನಿಮಿಷದಲ್ಲಿ ಡೌನ್‌ಲೋಡ್ ಆದರೆ 5ಜಿಯಲ್ಲಿ ಕೇವಲ 35 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಆಗುತ್ತದೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ
Advertisement
ಕೆಲವು ವರ್ಷಗಳಿಂದ ಮೊಬೈಲ್ ಫೋನ್‌ಗಳಲ್ಲಿ ವೀಡಿಯೋ ಕ್ವಾಲಿಟಿಗಳು ಹೆಚ್ಚುತ್ತಿದ್ದು, ಇದರಿಂದ 4ಜಿ ನೆಟ್‌ವರ್ಕ್ ಕೂಡಾ ಬಫರಿಂಗ್ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. 5ಜಿ ತಂತ್ರಜ್ಞಾನದಿಂದ ವೀಡಿಯೋ ಸ್ಟ್ರೀಮಿಂಗ್‌ನ ವೇಗ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದರೊಂದಿಗೆ ವರ್ಚುವಲ್ ರಿಯಾಲಿಟಿ ವೀಡಿಯೋಗಳನ್ನೂ ವೀಕ್ಷಿಸಲು ಸಹಾಯವಾಗಲಿದೆ ಎಂದು ಅಧ್ಯಯನಗಳು ತಿಳಿಸಿವೆ.
Advertisement
ಜುಲೈ 26 ರಂದು 5ಜಿ ಸ್ಪೆಕ್ಟ್ರಂ ಹರಾಜು ಪ್ರಾರಂಭವಾಗಲಿದ್ದು, ಜುಲೈ ಅಂತ್ಯದಲ್ಲಿ ಮುಕ್ತಾಯವಾಗಲಿದೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ ರೋಲ್‌ಔಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ