ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 562 ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಇನ್ನೊಂದೆಡೆ ಬೆಂಗಳೂರು ನಗರದಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಐನೂರರ ಗಡಿ ದಾಟಿದೆ.
Advertisement
ಇಂದು ಬೆಂಗಳೂರು ನಗರದಲ್ಲಿ 545 ಕೇಸ್ ದಾಖಲಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3,263ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ಹೊರತು ಪಡಿಸಿ ಮೈಸೂರಲ್ಲಿ ದಾಖಲಾದ 4 ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ ಕೇಸ್ ಆಗಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,387ಕ್ಕೆ ತಲುಪಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 2.07 ಏರಿಕೆ ಕಂಡಿದೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಸಿಸಿಟಿವಿ ಅಳವಡಿಕೆ ಕಾಮಗಾರಿ – ಜೆಸಿಬಿಗೆ ಅಡ್ಡನಿಂತು ಸ್ಥಳೀಯರ ಹೈಡ್ರಾಮಾ
Advertisement
Advertisement
ಬೆಂಗಳೂರು ಹೊರತು ಪಡಿಸಿ ಉಳಿದಂತೆ 11 ಜಿಲ್ಲೆಗಳಲ್ಲಿ 17 ಕೇಸ್ ಮತ್ತು 18 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಇಂದು ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಇಂದು 352 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,066 ಮರಣ ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ʼವಿದ್ಯಾಪೀಠʼಕ್ಕೆ ಬನ್ನಿ ಮಾಹಿತಿ ಪಡೆಯಿರಿ
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 39,55,871 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,12,376 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 48,604 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 27,123 ಸ್ಯಾಂಪಲ್ (ಆರ್ಟಿಪಿಸಿಆರ್ 20,659 + 6,464 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 545, ಮೈಸೂರು 4, ದಕ್ಷಿಣಕನ್ನಡ 3, ಚಿತ್ರದುರ್ಗ 2, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾಸನ, ತುಮಕೂರು, ಉಡುಪಿ ಮತ್ತು ಉತ್ತರಕನ್ನಡದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 562 ಕೇಸ್ ವರದಿಯಾಗಿದೆ.