ಬೆಂಗಳೂರು: ನೈಸ್ ಯೋಜನೆಗೆ ನೀಡಲಾಗಿರುವ 543 ಎಕರೆ ಹೆಚ್ಚುವರಿ ಭೂಮಿಯನ್ನು ಹಿಂಪಡೆಯುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನೈಸ್ ರಸ್ತೆ ದೊಡ್ಡ ಸಮಸ್ಯೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ನೈಸ್ ರಸ್ತೆಗೆ ಬೇಕಾದ ಎಲ್ಲ ಮಂಜೂರಾತಿ ಮಾಡಲಾಗಿತ್ತು. ಅದು ಅವರ ಪಾಪದ ಕೂಸು. ಈಗ ಅದರಿಂದ ಯಾವುದೇ ಉಪಯೋಗ ಆಗ್ತಿಲ್ಲ. ಬೆಂಗಳೂರು ಜನತೆಗೆ ದೊಡ್ಡ ಹೊರೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಪೇನ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳಕ್ಕೆ ಎಸ್.ಟಿ.ಸೋಮಶೇಖರ್ ಪ್ರವಾಸ
Advertisement
Advertisement
ಬೆಂಗಳೂರಿನಲ್ಲಿ ಕಾಂಕ್ರಿಟ್ ರಸ್ತೆ ಆಗಬೇಕಿತ್ತು. ಈವರೆಗೂ ಮಾಡಿಲ್ಲ. ಕ್ರಾಸ್ ರೋಡ್ ಪಾಸ್ ಆಗುವ ಬ್ರಿಡ್ಜ್ ಮಾಡುವುದರಲ್ಲೂ ನಿಯಮ ಉಲ್ಲಂಘನೆ ಆಗಿದೆ. ಹಾಗಾಗಿ, ನೈಸ್‌ಗೆ ಈ ಹಿಂದೆ ನಿಗದಿ ಮಾಡಿದ್ದ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲು ಚರ್ಚೆಯಾಗಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲು ಸಂಪುಟ ಉಪಸಮಿತಿ ತೀರ್ಮಾನ ಮಾಡಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಗತ್ತನ್ನು ನೋಡಲು ಅವಕಾಶ ಕಲ್ಪಿಸುವ ಶ್ರೇಷ್ಠ ಕಾರ್ಯವೇ ನೇತ್ರದಾನ: ಬಿ.ಸಿ.ನಾಗೇಶ್
Advertisement
Advertisement
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ನೈಸ್‌ಗೆ 543 ಎಕರೆ ಹೆಚ್ಚುವರಿ ಭೂಮಿ ಕೊಡಲಾಗಿದೆ. ಅದನ್ನು ಹಿಂಪಡೆಯುವ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ. 15 ದಿನಗಳಲ್ಲಿ ಇನ್ನೊಂದು ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ಆ ವರದಿ ಬಂದ ಬಳಿಕ ಇನ್ನೊಂದು ಸಭೆಯಲ್ಲಿ ನೈಸ್‌ಗೆ ಸಂಬಂಧಪಟ್ಟಂತೆ ಕೆಲ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ತನಿಖೆಗೆ ಸಹಕರಿಸದ ಪ್ರಿಯಾಂಕ್ ಖರ್ಗೆಯಿಂದ ಪಲಾಯನವಾದ: ಅರಗ ಜ್ಞಾನೇಂದ್ರ ಕಿಡಿ
ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಉಪಸ್ಥಿತರಿದ್ದರು.