ಬೆಂಗಳೂರು: ಸ್ಪೇನ್‍ನ ಫೆರಿಯಾ ಡೆ ಝರಗೋಜದಲ್ಲಿ ನಡೆಯುವ 42ನೇ ದ್ವೈ ವಾರ್ಷಿಕ “ಫಿಮಾ ಅಗ್ರಿಕೋಲ-2022” ಕೃಷಿ ವಸ್ತು ಪ್ರದರ್ಶನ ಮೇಳಕ್ಕೆ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು ಸೋಮವಾರ ಸಂಜೆ ಪ್ರಯಾಣ ಬೆಳೆಸಿದರು.
ಕೃಷಿ ಉತ್ಪನ್ನ ಹಾಗೂ ಕೃಷಿ ಯಂತ್ರೋಪಕರಣಗಳ ಈ ವಸ್ತು ಪ್ರದರ್ಶನ 2022ರ ಏಪ್ರಿಲ್ 26 ರಿಂದ 30ರ ವರೆಗೆ ನಡೆಯಲಿದೆ. ಸುಮಾರು 80 ದೇಶಗಳಿಂದ 1600 ಕ್ಕೂ ಹೆಚ್ಚು ಪ್ರದರ್ಶಕರು, 2.30 ಲಕ್ಷಕ್ಕೂ ಹೆಚ್ಚು ವೀಕ್ಷಕರು ಭಾಗವಹಿಸುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Advertisement
Advertisement
ಕೃಷಿ ಪವರ್ ಯೂನಿಟ್‍ಗಳು, ಬಿತ್ತನೆ ಯಂತ್ರೋಪಕರಣಗಳು, ನಾಟಿ-ಕಟಾವು ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ಹಸಿರುಮನೆ, ಗಾರ್ಡನ್ ಉಪಕರಣಗಳು, ಲಾಜಿಸ್ಟಿಕ್ ಸರ್ವೀಸ್ ಇನ್ನೂ ಅನೇಕ ಕೃಷಿ ಸಂಬಂಧಿತ ವಿಷಯಗಳು ಈ ವಸ್ತು ಪ್ರದರ್ಶನದಲ್ಲಿ ಇವೆ.
Advertisement
ಕೃಷಿ ಉತ್ಪನ್ನ ಹೆಚ್ಚಳ ಹಾಗೂ ಪರಿಸರ ಸಂರಕ್ಷಣೆಗೆ ವಿನೂತನ ಪರಿಹಾರಗಳನ್ನೂ ಈ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಇದನ್ನೂ ಓದಿ: ಮುಗಿಯದ ವಿಚಾರಣೆ – BBMP ಚುನಾವಣೆ ಮತ್ತಷ್ಟು ವಿಳಂಬ