ರಾಜ್ಯದ ಜಲಾಶಯಗಳಲ್ಲಿ 536 ಟಿಎಂಸಿ ನೀರು ಸಂಗ್ರಹ – ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

Public TV
2 Min Read
KRS DAM MYSURU

ಬೆಂಗಳೂರು: ರಾಜ್ಯದ ಎಲ್ಲ ಜಲಾಶಯಗಳಿಂದ (Reservoir) ಒಟ್ಟು 536 ಟಿಎಂಸಿ ನೀರು ಸಂಗ್ರಹವಾಗಿದೆ. ಯಾವ ನದಿ ಅಪಾಯಕಾರಿಯಾಗಿದೆ? ಎಲ್ಲೆಲ್ಲಿ ಅನಾಹುತಗಳು ಆಗಬಹುದು ಎಂಬುದರ ಬಗ್ಗೆ ಗಮನ ಇಟ್ಟಿದ್ದೇವೆ ಅಂತ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ (Krishna Byregowda) ಹೇಳಿದ್ದಾರೆ.

Krishna ByreGowda

ವಿಧಾನಸಭೆಯಲ್ಲಿ ನಡೆದ ಅತಿವೃಷ್ಟಿ ಹಾನಿ ಚರ್ಚೆಗೆ ಸಂಬಂಧಪಟ್ಟಂತೆ ಉತ್ತರ ಕೊಟ್ಟ ಕೃಷ್ಣಬೈರೇಗೌಡ, ಕೆಆರ್‌ಎಸ್‌ಗೆ (KRS) 44.617 ಕ್ಯುಸೆಕ್‌ ನೀರು ಹರಿದು ಬರುತ್ತಿದೆ, ಆಲಮಟ್ಟಿ ಜಲಾಶಯಕ್ಕೆ 40.478 ಕ್ಯುಸೆಕ್‌ ನೀರಿನ ಒಳಹರಿಯುವು ಇದೆ. ಹಾಗಾಗಿ ಎಲ್ಲ ಕಡೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗ್ತಿದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭ – ಸಂಸದ ಬ್ರಿಜೇಶ್‌ ಚೌಟ ಮನವಿಗೆ ತಕ್ಷಣವೇ ಸ್ಪಂದಿಸಿದ ರೈಲ್ವೆ ಇಲಾಖೆ

Alamatti Dam

2,225 ಗ್ರಾಮಗಳನ್ನ ಮಳೆಹಾನಿ ಪ್ರದೇಶಗಳೆಂದು ಗುರುತಿಸಿದ್ದೇವೆ. 2.38 ಲಕ್ಷ ಜನ ತೊಂದರೆಗೆ ಸಿಕ್ಕಿಕೊಳ್ಳಬಹುದೆಂದು ಗುರುತಿಸಿದ್ದೇವೆ. ಮಳೆಹಾನಿ ಪೀಡಿತ ಆಗುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಟಾಸ್ಕ್‌ಫೋರ್ಸ್‌ ರಚನೆ ಮಾಡಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: PublicTV Explainer: ಬಜೆಟ್‌ ಎಂದರೇನು? ಆಯವ್ಯಯದ ಬಗ್ಗೆ ನಿಮಗೆಷ್ಟು ಗೊತ್ತು?

kabini dam

ಸರ್ಕಾರ ಜನರ ಜೊತೆ ಇದೆ, ಎಲ್ಲ ಸಮಸ್ಯೆಗಳನ್ನೂ ಪರಿಹಾರ ಮಾಡುತ್ತೇವೆ. ಸೋಮವಾರ ಸಂಪುಟ ಸಭೆ ಇದೆ, ಸಭೆಯಲ್ಲೂ ಮಳೆಹಾನಿ ಚರ್ಚೆ ಮಾಡಿ ಪರಿಹಾರ ಕೊಡುತ್ತೇವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತೆ ಎಂಬ ಮುನ್ಸೂಚನೆ ಜನವರಿಯಲ್ಲೇ ಇತ್ತು. ಜೂನ್ 1 ರಿಂದ ಇಲ್ಲಿ ತನಕ ವಾಡಿಕೆ ಮಳೆ 365 ಮಿಲಿಮೀಟರ್ ಇರಬೇಕಿತ್ತು, ಆದ್ರೆ 447 ಮಿಲಿ ಮೀಟರ್ ಮಳೆ ಆಗಿದೆ. ಕರಾವಳಿ, ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ ಅಂತ ಮಾಹಿತಿ ನೀಡಿದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ 21 ಹಗರಣ ನಡೆದಿದೆ – ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ ಸಿಎಂ

29 ಆರೈಕೆ ಕೇಂದ್ರಗಳನ್ನ ಸ್ಥಾಪಿಸಲಾಗಿದೆ, 2,331 ಸಂತ್ರಸ್ಥರಿಗೆ ಊಟ, ವಸತಿ, ಉಪಹಾರ ಕೊಡುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ 777 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಹಣ ಖರ್ಚಾದ ಕೂಡಲೇ ಮತ್ತೆ ಹಣ ಬಿಡುಗಡೆ ಮಾಡುತ್ತೇವೆ, ಹಣದ ಕೊರತೆ ಇಲ್ಲ. ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ಕೊಡಲು ಸೂಚಿಸಿದ್ದೇವೆ. 5 ಎನ್‌ಡಿಆರ್‌ಎಫ್ ತುಕಡಿಗಳನ್ನ ಮಳೆಹಾನಿ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಗುಡ್‌ನ್ಯೂಸ್‌ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್‌ ಸುಧೀರ್‌ – ಸೋನಲ್‌ ಮದುವೆ ಡೇಟ್‌ ಫಿಕ್ಸ್‌

Share This Article