ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಇದೀಗ 526ನೇ ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ಕಾಗಜ್ 2 ಎಂದು ಹೆಸರಿಡಲಾಗಿದೆ. ನಟನಾಗಿ, ನಾಯಕನಾಗಿ, ಖಳನಟನಾಗಿ ಸಿನಿಮಾ ರಂಗದಲ್ಲಿ ಮಿಂಚಿರುವ ಅನುಪಮ್ ಖೇರ್, ಇತ್ತೀಚೆಗಷ್ಟೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡಿತ್ತು. ಆ ಸಿನಿಮಾದ ನಂತರ ಕಾಗಜ್ 2 ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನುಪಮ್ ಖೇರ್ ಪಾತ್ರವನ್ನು ಒಪ್ಪಿಕೊಂಡರೆ, ಅಲ್ಲೊಂದು ಖಡಕ್ ಸಂದೇಶ ಇರಲಿದೆ ಎಂದಾಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲೂ ದೇಶ ಪ್ರೇಮವನ್ನು ಸಾರುವಂತಹ ಮತ್ತು ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ವಿಷಯಗಳು ಇದ್ದವು. ಕಾಗಜ್ 2 ನಲ್ಲೂ ಅಂಥದ್ದೇ ಪವರ್ ಫುಲ್ ಕಥೆ ಇರಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್
ತಮ್ಮ 526ನೇ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಅನುಪಮ್ ಖೇರ್, ಕ್ಪ್ಲ್ಯಾಪ್ ಬೋರ್ಡ್ ಇರುವಂತಹ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಹೊಸ ಸಿನಿಮಾಗೆ ಶುಭ ಹಾರೈಸಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ವಿ.ಕೆ. ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು, ಎರಡು ದಿನಗಳ ಹಿಂದಿಯೇ ಶೂಟಿಂಗ್ ಆರಂಭಿಸಿದೆ.