ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 50,210 ಕೇಸ್ ದಾಖಲಾಗಿದ್ದು, 10 ಮರಣ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್ 22.77%ಗೆ ಏರಿಕೆ ಕಂಡಿದೆ.
Advertisement
ಬೆಂಗಳೂರಿನಲ್ಲಿ ನಿನ್ನೆ 17,266 ಕೇಸ್ ದಾಖಲಾಗಿದ್ದರೆ, ಇಂದು ಒಟ್ಟು 26,299 ಪಾಸಿಟಿವ್ ಪ್ರಕರಣ ದಾಖಲಾಗಿದೆ. 8 ಮರಣ ಪ್ರಕರಣ ಕೂಡ ಬೆಂಗಳೂರಿನಲ್ಲಿ ವರದಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 165 ಮಂದಿಗೆ ಓಮಿಕ್ರಾನ್ ದೃಢ
Advertisement
Daily new cases cross 50k in Karnataka today:
◾New cases in State:50,210
◾New cases in B'lore: 26,299
◾Positivity rate in State: 22.77%
◾Discharges: 22,842
◾Active cases State: 3,57,796 (B'lore- 231k)
◾Deaths:19 (B'lore- 08)
◾Tests: 2,20,459#COVID #Omicron #Karnataka
— Dr Sudhakar K (@mla_sudhakar) January 23, 2022
Advertisement
ರಾಜ್ಯದಲ್ಲಿ ಇಂದು ಒಟ್ಟು 22,282 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು 3,57,796 ಮತ್ತು ಬೆಂಗಳೂರಿನಲ್ಲಿ 2,31,000ಕ್ಕೆ ಏರಿಕೆ ಕಂಡಿದೆ. ಇಂದು 2,20,459 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಪಾಸಿಟಿವ್
Advertisement
ರಾಜ್ಯದಲ್ಲಿಂದು 165 ಹೊಸ ಓಮಿಕ್ರಾನ್ ಕೇಸ್‍ಗಳು ವರದಿಯಾಗಿದೆ. ಅಲ್ಲದೇ ಬೆಂಗಳೂರಿನಲ್ಲಿಯೇ 165 ಓಮಿಕ್ರಾನ್ ಕೇಸ್‍ಗಳು ದಾಖಲಾಗಿದೆ. ದಿನೇ ದಿನೇ ರಾಜ್ಯ ರಾಜಧಾನಿಯಲ್ಲಿ ಓಮಿಕ್ರಾನ್ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕಂಡುಬಂದ ಓಮಿಕ್ರಾನ್ ಸೋಂಕಿತರಲ್ಲಿ ಬಹುಪಾಲು ಬೆಂಗಳೂರಿನಲ್ಲೆ ಪತ್ತೆಯಾಗಿದೆ.
165 new cases of Omicron are confirmed today in Bengaluru taking the overall tally in the State to 931.#Omicron #COVID
— Dr Sudhakar K (@mla_sudhakar) January 23, 2022
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು 165 ಹೊಸ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 931 ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ಬೆಂಗಳೂರು ನಗರ 26,299, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 552, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1,922, ಹಾವೇರಿ 165, ಕಲಬುರಗಿ 853, ಕೊಡಗು 1,139, ಕೋಲಾರ 824, ಕೊಪ್ಪಳ 510, ಮಂಡ್ಯ 1,455 ಮೈಸೂರು 4,359, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1,963 ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249 ಮತ್ತು ಯಾದಗಿರಿಯಲ್ಲಿ 151 ಪಾಸಿಟಿವ್ ಪ್ರಕರಣ ದಾಖಲಾಗಿದೆ.