ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 5,019 ಒಟ್ಟು ಪಾಸಿಟಿವ್ ಪ್ರಕರಣ ದಾಖಲಾಗಿದೆ. ನಿನ್ನೆ 5,339 ಕೇಸ್ ದಾಖಲಾಗಿತ್ತು. ಬೆಂಗಳೂರು ನಗರದಲ್ಲಿ 3 ತಿಂಗಳ ಮಗು ಸಹಿತ ಒಟ್ಟು ರಾಜ್ಯದಲ್ಲಿ 39 ಮರಣ ಪ್ರಕರಣ ದಾಖಲಾಗಿದೆ.
Advertisement
ಪಾಸಿಟಿವಿಟಿ ರೇಟ್ 4.25%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 52,013 ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 2,315 ಹೊಸ ಕೇಸ್ ಪತ್ತೆಯಾಗಿದ್ದು, ಇಂದು 17 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೋಮವಾರದಿಂದ 10ನೇ ತರಗತಿ ವರೆಗೆ ಶಾಲೆ ಆರಂಭ – ಸದ್ಯಕ್ಕಿಲ್ಲ ಪಿಯುಸಿ, ಡಿಗ್ರಿ ಕಾಲೇಜ್
Advertisement
Advertisement
ರಾಜ್ಯದಲ್ಲಿ ಒಟ್ಟು 13,923 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,17,119 ಮಂದಿಗೆ ಕೊರೊನಾ ಬಂದಿದೆ. ಒಟ್ಟು 38,25,538 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.77% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 80,171 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,17,956 ಸ್ಯಾಂಪಲ್ (ಆರ್ಟಿಪಿಸಿಆರ್ 88,330 + 29,626 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮುಸ್ಲಿಮರ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿಶ್ರೀ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 32, ಬಳ್ಳಾರಿ 220, ಬೆಳಗಾವಿ 196, ಬೆಂಗಳೂರು ಗ್ರಾಮಾಂತರ 52, ಬೆಂಗಳೂರು ನಗರ 2,315, ಬೀದರ್ 26, ಚಾಮರಾಜನಗರ 83, ಚಿಕ್ಕಬಳ್ಳಾಪುರ 47, ಚಿಕ್ಕಮಗಳೂರು 31, ಚಿತ್ರದುರ್ಗ 94, ದಕ್ಷಿಣ ಕನ್ನಡ 90, ದಾವಣಗೆರೆ 44, ಧಾರವಾಡ 124, ಗದಗ 20, ಹಾಸನ 101, ಹಾವೇರಿ 49, ಕಲಬುರಗಿ 96, ಕೊಡಗು 171, ಕೋಲಾರ 58, ಕೊಪ್ಪಳ 45, ಮಂಡ್ಯ 117, ಮೈಸೂರು 261, ರಾಯಚೂರು 87, ರಾಮನಗರ 26, ಶಿವಮೊಗ್ಗ 141, ತುಮಕೂರು 234, ಉಡುಪಿ 78, ಉತ್ತರ ಕನ್ನಡ 76, ವಿಜಯಪುರ 88 ಮತ್ತು ಯಾದಗಿರಿಯಲ್ಲಿ 17 ಪಾಸಿಟಿವ್ ಪ್ರಕರಣ ದಾಖಲಾಗಿದೆ.