ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ – ಕೇಸರಿ ಬೆಂಕಿ ಹೊತ್ತು ಉರಿಯುತ್ತಿರೋವಾಗ್ಲೇ ಮತ್ತೊಂದು ಟೆನ್ಶನ್ ಶುರುವಾಗಿದೆ. ಮುಸ್ಲಿಂಮರು ಮಸೀದಿಯಲ್ಲಿ ಆಜಾನ್ ಕೂಗುವ ರೀತಿಯಲ್ಲೇ ಕಾಳಿಮಠದ ಋಷಿಕೇಶ ಸ್ವಾಮೀಜಿ ರಾಮಜಪ ಮಾಡಿದ್ದಾರೆ.
Advertisement
ಮುಸ್ಲಿಮರು ಮಸೀದಿಯಲ್ಲಿ ಆಜಾನ್ ಕೂಗುವ ರೀತಿಯಲ್ಲೇ ಕಾಳಿಶ್ರೀ ಬೆಂಗಳೂರಿನ ಚುಂಚನ ಘಟ್ಟದಲ್ಲಿರುವ ರಾಮಾಂಜನೇಯ ದೇವಾಲಯಲ್ಲಿ ಧ್ವನಿ ವರ್ಧಕ ಅಳವಡಿಸಿ ರಾಮ ಜಪಕ್ಕೆ ಮುಂದಾಗಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೋಮವಾರದಿಂದ 10ನೇ ತರಗತಿ ವರೆಗೆ ಶಾಲೆ ಆರಂಭ – ಸದ್ಯಕ್ಕಿಲ್ಲ ಪಿಯುಸಿ, ಡಿಗ್ರಿ ಕಾಲೇಜ್
Advertisement
Advertisement
ಅಜಾನ್ ಮಾದರಿಯಲ್ಲಿ ಮೈಕ್ ಅಳವಡಿಸಿ ಬೆಳಗ್ಗೆ 5.33ಕ್ಕೆ 3 ಬಾರಿ ರಾಮ ಜಪ ಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ನೀವು ಮೈಕ್ ತೆಗೆಯಿರಿ ಇಲ್ಲಂದ್ರೆ ನಾವು ತೆಗೆಯುತ್ತೇವೆ ಎಂದರು. ಕೂಡಲೇ ಸ್ವಾಮಿಜೀ ಕಾನೂನಿಗೆ ಗೌರವಿಸಿ ತೆಗೆಯುತ್ತೇವೆ ಇಲ್ಲವಾದ್ರೆ ನಾವು ಮೈಕ್‍ನಲ್ಲಿ ಕೂಗುವುದನ್ನು ನಿಲ್ಲಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಿಕ್ಷಣ ಕೊಡಿ ಅಂದ್ರೆ ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋಗಿದ್ದಾರೆ: ರೇವಣ್ಣ ಟೀಕೆ
Advertisement
ಇದೀಗ ರಾಜ್ಯದಲ್ಲಿ ಹಿಜಬ್-ಕೇಸರಿ ನಡುವೆ ಹೊಸ ಸಂಘರ್ಷವೆಂಬಂತೆ ಆಜಾನ್ ಹುಟ್ಟಿಕೊಳ್ಳುವ ಸಾಧ್ಯತೆ ಇದ್ದು, ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇದೆ.