ಮಾತುಬಾರದ ತಾಯಿ ನಾಪತ್ತೆ – ಸುಳಿವುಕೊಟ್ಟವರಿಗೆ 50 ಸಾವಿರ ರೂ. ಘೋಷಿಸಿದ ಮಗಳು

Public TV
1 Min Read
Lakshmamma

ಕೋಲಾರ: ಮಾತುಬಾರದ ಮಾನಸಿಕ ಅಸ್ವಸ್ಥ ವೃದ್ಧೆ ಒಬ್ಬರು ಮುಳಬಾಗಿಲಿನ (Mulabagilu) ಮುತ್ಯಾಲಪೇಟೆಯಿಂದ ನಾಪತ್ತೆಯಾಗಿದ್ದು, ಮಹಿಳೆಯ (Woman) ಸುಳಿವು ಕೊಟ್ಟವರಿಗೆ 50 ಸಾವಿರ ರೂ. ನಗದು ಬಹುಮಾನವನ್ನು ಆಕೆಯ ಮಗಳು ಘೋಷಿಸಿದ್ದಾರೆ.

ಲಕ್ಷ್ಮಮ್ಮ (52) ಎಂಬವರು ಕಳೆದ ನಾಲ್ಕು ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು. ಆಕೆಯ ಕುಟುಂಬಸ್ಥರು ನಿರಂತರವಾಗಿ ಹುಡುಕಿದರೂ ಲಕ್ಷ್ಮಮ್ಮ ಪತ್ತೆಯಾಗಿಲ್ಲ. ಅಲ್ಲದೇ ಮುಳಬಾಗಿಲು ಪೊಲೀಸರಿಗೂ ಈ ಸಂಬಂಧ ದೂರು ನೀಡಲಾಗಿದೆ. ಆದರೆ ಮಹಿಳೆಯ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ

ಇದರಿಂದಾಗಿ ಮಹಿಳೆಯ ಮಗಳು ಪ್ರಮೀಳಾ ಹಾಗೂ ಕುಟುಂಬಸ್ಥರ ಲಕ್ಷ್ಮಮ್ಮ ಅವರ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಮ್ಯಾನೇಜರ್‌ಗೆ ಬೆದರಿಸಿ 5.6 ಕೋಟಿ ರೂ. ಲೂಟಿ

Web Stories

Share This Article