ಬ್ರಿಟನ್: ಯುಕೆಯಲ್ಲಿ ಹಿಂದೂ-ಮುಸ್ಲಿಂ (Hindu-Muslim) ಉದ್ವಿಗ್ನತೆ ಸೃಷ್ಟಿಗೆ ಭಾರತದ 500 ಟ್ವಿಟ್ಟರ್ ಖಾತೆಗಳು ಕಾರಣವಾಗಿವೆ ಎಂದು ಸಂಶೋಧನೆಯ ರಿಪೋರ್ಟ್‌ವೊಂದನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.
ರಟ್ಜರ್ಸ್ ವಿಶ್ವವಿದ್ಯಾನಿಲಯ ಪ್ರಕಾರ, ಲೀಸೆಸ್ಟರ್‌ನಲ್ಲಿ ಗಲಭೆಗಳ ಸಂದರ್ಭದಲ್ಲಿ 500 ಟ್ವಿಟ್ಟರ್ (Twitter) ಖಾತೆಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೀಮ್‌ಗಳು ಮತ್ತು ಬೆಂಕಿಯಿಡುವ ಚಿತ್ರಗಳನ್ನು ಹರಿಬಿಡಲಾಗಿತ್ತು ಎಂದು ತಿಳಿಸಿದೆ. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು
Advertisement
Advertisement
ಆಗಸ್ಟ್ 27 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ನಂತರದ ದಿನಗಳಲ್ಲಿ ನೂರಾರು ಜನರು ಬೀದಿಗಿಳಿದರು. ಕೆಲವು ಗಲಭೆಕೋರರು ಕೋಲುಗಳು ಮತ್ತು ಲಾಠಿಗಳನ್ನು ಹಿಡಿದು ಗಾಜಿನ ಬಾಟಲಿಗಳನ್ನು ಎಸೆದರು. ಘರ್ಷಣೆಯ ಸಮಯದಲ್ಲಿ ಮನೆಗಳು, ಕಾರುಗಳು ಮತ್ತು ಧಾರ್ಮಿಕ ಕಲಾಕೃತಿಗಳನ್ನು ಧ್ವಂಸಗೊಳಿಸಲಾಯಿತು. ಇದು ವಾರಗಳವರೆಗೆ ನಡೆಯಿತು. ಗಲಭೆ ಪ್ರಕರಣದಲ್ಲಿ 47 ಮಂದಿಯನ್ನು ಬಂಧಿಸಲಾಗಿತ್ತು ಎಂದು ಲೀಸೆಸ್ಟರ್‌ಶೈರ್ ಪೊಲೀಸರು ತಿಳಿಸಿದ್ದಾರೆ.
Advertisement
ಮಸೀದಿಗಳಿಗೆ ಬೆಂಕಿ ಹಚ್ಚುತ್ತಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಅಶಾಂತಿ ವಾತಾವರಣ ಸೃಷ್ಟಿಸುವ ಅನೇಕ ಟ್ವಿಟ್ಟರ್ ಖಾತೆಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಇದನ್ನೂ ಓದಿ: ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು
Advertisement
ಗೂಗಲ್ (Google), ಯೂಟ್ಯೂಬ್ (YouTube), ಮೆಟಾ ಪ್ಲಾಟ್‌ಫಾರ್ಮ್, ಇನ್‌ಸ್ಟಾಗ್ರಾಂ (Instagram), ಟ್ವಿಟ್ಟರ್, ಟಿಕ್‌ಟಾಕ್‌ನಿಂದ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ಎನ್‌ಸಿಆರ್‌ಐ ವರದಿಯನ್ನು ಪ್ರಕಟಿಸಿದೆ. ವಿದೇಶಿ ಪ್ರಭಾವಿಗಳು ಸ್ಥಳೀಯ ಮಟ್ಟದಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ತಿಳಿಸಿದೆ.