ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಅವರ 72ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಡಾ.ವಿಷ್ಣು ಸೇನಾನಿಗಳು ( Dr. Vishnu Senani) ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಸಿನಿಮಾ ರಂಗಕ್ಕೆ ಬಂದು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟು ಹಬ್ಬದ ದಿನದಂದು ಐವತ್ತು ಕಟೌಟ್ ನಿಲ್ಲಿಸಲು ಅಭಿಮಾನಿಗಳು ಸಂಕಲ್ಪ ಮಾಡಿದ್ದಾರೆ. ಪ್ರತಿ ವರ್ಷವೂ ನೆಚ್ಚಿನ ನಟನ ಹುಟ್ಟು ಹಬ್ಬ(Birthday)ವನ್ನು ನಾನಾ ರೀತಿಯಲ್ಲಿ ಆಚರಿಸಿಕೊಂಡು ಬಂದಿರುವ ಅಭಿಮಾನಿಗಳು ಈ ಸಲ ಕಟೌಟ್ ಮೂಲಕ ದಾಖಲೆ ಸೃಷ್ಟಿಸಲು ಹೊರಟಿದ್ದಾರೆ.
Advertisement
ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು ಈ ಡಿಸೆಂಬರ್ 29ಕ್ಕೆ ೫೦ (Fifty Years)ವರ್ಷಗಳಾಗಲಿವೆ. ಹಾಗಾಗಿ ಅವರ ಹುಟ್ಟು ಹಬ್ಬದ ದಿನದಂದು ಸುಮಾರು 50 ಕಟೌಟ್ ಗಳನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿಲ್ಲಿಸಲಾಗುತ್ತಿದೆ. ಆ ಪ್ರತಿ ಕಟೌಟ್ ಸಹ ಡಾ.ವಿಷ್ಣು ಅವರ ಒಂದೊಂದು ಯಶಸ್ವಿ ಚಿತ್ರದ್ದಾಗಿರಲಿದೆ. ಈ ಕಟೌಟ್ (Cutout) ಗಳನ್ನು ರಾಜ್ಯದ ಬೇರೆ ಬೇರೆ ಭಾಗದ ಸುಮಾರು 50 ಅಭಿಮಾನಿಗಳು ಸೇರಿ ನಿರ್ಮಿಸುತ್ತಿರುವುದು ವಿಶೇಷ. ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ
Advertisement
Advertisement
ಈ ಪ್ರಮಾಣದ ಕಟೌಟ್ ಗಳು ಇಡೀ ವಿಶ್ವದಲ್ಲಿಯೇ ಒಂದೇ ಸ್ಥಳದಲ್ಲಿ ಯಾವೊಬ್ಬ ಕಲಾವಿದನ ಹೆಸರಲ್ಲೂ ಆಗಿಲ್ಲವೆಂಬ ವಿಶ್ವದಾಖಲೆ ಕೂಡ ಆಗಲಿದೆ. ವಿಶ್ವ ದಾಖಲೆಗಾಗಿ ಈಗಾಗಲೇ ವಿಷ್ಣು ಸೇನಾನಿಗಳು ರಿಜಿಸ್ಟರ್ ಮಾಡುವಂತಹ ಕೆಲವು ಸಂಸ್ಥೆಗಳಿಗೆ ಮಾಹಿತಿ ಕೂಡ ಕೊಟ್ಟಿದ್ದಾರೆ. ಹಾಗಾಗಿ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಪುಣ್ಯಭೂಮಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.
Advertisement
ಈ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿಗಳಾದ ಆನಂದ್ ರಾಚ್, ರಘು ಎಸ್, ತುಳಸೀಕೃಷ್ಣ, ರಾಧಾ ಗಂಗಾಧರ್, ವಿಜಯಲಕ್ಷ್ಮಿ, ರವಿಕುಮಾರ್ ದೇವರಮನಿ, ಸುಹಾಸ್ ಯಮಲೂರು, ಜಾನಕೀವರ್ಧನ್, ಸಿಂಹಘರ್ಜನೆ ಮಂಜು, ಮಲ್ಲಿಕಾರ್ಜುನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.