ಬೆಂಗಳೂರು: ಟಿಕೆಟ್ ಹಂಚಿಕೆ ಸಿದ್ಧತೆ ಬೆನ್ನಲ್ಲೇ ಎಐಸಿಸಿಯಿಂದ (AICC) ಕೆಪಿಸಿಸಿಗೆ (KPCC) ಹೊಸ ಸಂದೇಶ ರವಾನೆಯಾಗಿದೆ. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಹೊಸಬರಿಗೆ ಮಣೆ ಹಾಕಲು ಕಾಂಗ್ರೆಸ್ (Congress) ಹೈ ಕಮಾಂಡ್ ಮಂದಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಹಿಂದೆಂದಿಗಿಂತ ದೊಡ್ಡ ಪ್ರಮಾಣದಲ್ಲಿ ಈ ಬಾರಿ ಹೊಸಬರಿಗೆ ಮಣೆ ಹಾಕಲು ತೀರ್ಮಾನಿಸಿದೆ. 224 ಕ್ಷೇತ್ರಗಳಲ್ಲಿ ಕನಿಷ್ಠ 50 ಹೊಸಬರಿಗೆ ಮಣೆ ಹಾಕಲೇಬೇಕು. 50 ಕ್ಷೇತ್ರದಲ್ಲಿ ಮಹಿಳೆಯರು, ಯುವಕರು ಒಳಗೊಂಡಂತೆ ಹೊಸ ಮುಖಕ್ಕೆ ಮಣೆ ಹಾಕಿ ಎಂದು ಎಐಸಿಸಿಯಿಂದ ಕೆಪಿಸಿಸಿಗೆ ಖಡಕ್ ಸಂದೇಶ ಬಂದಿದೆ. ಇದನ್ನೂ ಓದಿ: ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಫರ್ ಬರಲಿಲ್ಲ: ಸೋಮಶೇಖರ್ ಸ್ಪಷ್ಟನೆ
Advertisement
Advertisement
50 ಹೊಸ ಮುಖ ಸ್ಪರ್ಧೆ ಮಾಡಬಹುದಾದ ಕ್ಷೇತ್ರಗಳ ಪಟ್ಟಿಯನ್ನೂ ನೀಡಲು ಸೂಚನೆ ನೀಡಲಾಗಿದೆ. ಈ ಮೂಲಕ ಕಾಂಗ್ರೆಸ್‌ನಲ್ಲಿ 224 ಕ್ಷೇತ್ರಗಳ ಪೈಕಿ 50 ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
Advertisement
ಒಟ್ಟಾರೆ ಈ ಬಾರಿ ಕಾಂಗ್ರೆಸ್‌ನಲ್ಲಿ ಹೊಸ ಮುಖ ಹಾಗೂ ಯುವ ಮುಖಕ್ಕೆ ಮಣೆ ಹಾಕುವ ಬಗ್ಗೆ ಹೈ ಕಮಾಂಡ್ ಹೆಚ್ಚು ಆಸಕ್ತಿ ವಹಿಸಿದಂತೆ ಕಾಣುತ್ತಿದೆ. ಇದನ್ನೂ ಓದಿ: ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ- ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್