ಮಗಳ ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ: ನಟಿ ಸನ್ನಿ ಲಿಯೋನ್

Public TV
1 Min Read
FotoJet 2

ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಮನೆಯ ಕೆಲಸದಾಕೆಯ ಮಗಳು ಕಾಣೆಯಾಗಿರುವ (missing) ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ 9 ವರ್ಷದ ಮಗು ಮುಂಬೈನ (Mumbai) ಜೋಗೇಶ್ವರಿಯಿಂದ ನಾಪತ್ತೆಯಾಗಿರುವ ಕುರಿತು ಹೇಳಿಕೊಂಡಿದ್ದಾರೆ.

SUNNY LEONE

ಒಂಬತ್ತು ವರ್ಷದ ಮಗು ಅನುಷ್ಕಾ ಕಿರಣ್ ಮೋರೆ (Anushka Kiran More) ಗುರುವಾರ ಸಂಜೆಯಿಂದ ಕಾಣೆಯಾಗಿದ್ದಾರೆ. ಜೋಗೇಶ್ವರಿ ವೆಸ್ಟ್ ನ ಬೆಹ್ರಾಮ್ ಬೇಗ್ ನಿಂದ ನಾಪತ್ತೆಯಾಗಿರುವ ಮಗುವನ್ನು ಹುಡುಕಿಕೊಟ್ಟರೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 

ಮುಂಬೈ ಪೊಲೀಸ್ ರಿಗೆ ಅವರು ಮಾಹಿತಿ ನೀಡಿದ್ದು, ಅನುಷ್ಕಾಳನ್ನು ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಮನೆಗೆ ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಅನೇಕ ಮಕ್ಕಳು ಕಾಣೆಯಾಗುತ್ತಿದ್ದಾರೆ. ಮುಂಬೈವೊಂದರಲ್ಲೇ ಮುನ್ನೂರಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿರುವ ಪ್ರಕರಣವೂ ದಾಖಲಾಗಿದೆ.

Share This Article