ಆಟವಾಡ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು

Advertisements

ಉಡುಪಿ: ಮನೆಯ ಪಕ್ಕ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದಾನೆ. ಈ ದುರ್ಘಟನೆ ಬ್ರಹ್ಮಾವರದ ಉಪ್ಪೂರು ತೆಂಕಬೆಟ್ಟುನಲ್ಲಿ ನಡೆದಿದೆ.

ಮೃತ ದುರ್ದೈವಿ ಬಾಲಕನನ್ನು ಲಾರೆನ್ ಲೂವಿಸ್ (5) ಎಂದು ಗುರುತಿಸಲಾಗಿದೆ. ಈತ ಉಪ್ಪೂರಿನ ನಾರ್ಮನ್ ಮತ್ತು ಸಿಲ್ವಿಯಾ ದಂಪತಿಯ ಪುತ್ರ. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಶಿವಮೊಗ್ಗ ಬೀದಿಯಲ್ಲೇ ಬರ್ಬರ ಕೊಲೆ

Advertisements

ಕುವೈಟ್ ನಲ್ಲಿ ವಾಸವಾಗಿದ್ದ ಲಾರೆನ್ ಕುಟುಂಬ ಇತ್ತೀಚೆಗಷ್ಟೇ ಊರಿಗೆ ಮರಳಿತ್ತು. ದೂರದ ಊರಿಂದ ಬಂದ ಬಾಲಕನಿಗೆ ಇಲ್ಲಿಯ ಪರಿಸರ ಕಂಡು ಖುಷಿಯಾಗಿದ್ದಾನೆ. ಅಂತೆಯೇ ಲಾರೆನ್ ಮನೆಯ ಪಕ್ಕವೇ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಆತನ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದಾನೆ. ಪರಿಣಾಮ ಈಜಲು ಬಾರದೇ ಮೃತಪಟ್ಟಿದ್ದಾನೆ.

ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv

Advertisements
Exit mobile version