ಲಕ್ನೋ: ಕಳಪೆ ಕಾಮಗಾರಿಯ ಸರ್ಕಾರಿ ಶೌಚಾಲಯವೊಂದು (Toilet) ಕುಸಿದು 5 ವರ್ಷದ ಬಾಲಕನೊಬ್ಬ (Boy) ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿರುವ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ಜಖಿಂಪುರ ಖೇರಿ ಜಿಲ್ಲೆಯ ಮಗಲ್‌ಗಂಜ್ ಚಪರ್ತಾಲಾ ಗ್ರಮದಲ್ಲಿ ಘಟನೆ ನಡೆದಿದೆ. ಸರ್ಕಾರ ನಿರ್ಮಿಸಿದ ಶೌಚಾಲಯ ಕುಸಿದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ಬಾಲಕ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾನೆ.
ವರದಿಗಳ ಪ್ರಕಾರ, ಬಾಲಕ ಮನೆ ಹೊರಗಡೆ ಆಟವಾಡುತ್ತಿದ್ದ ಸಂದರ್ಭ ಅಲ್ಲೇ ನಿರ್ಮಿಸಲಾಗಿದ್ದ ಸರ್ಕಾರಿ ಶೌಚಾಲಯ ಆತನ ಮೇಲೆ ಏಕಾಏಕಿ ಕುಸಿದು ಬಿದ್ದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಕುಟುಂಬದವರು ತಿಳಿಸಿದ್ದಾರೆ. ಇದನ್ನೂ ಓದಿ: ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ
2016ರಲ್ಲಿ ಗ್ರಾಮದ ಮುಖಂಡರು ಹಾಗೂ ಗ್ರಾ.ಪಂ. ಕಾರ್ಯದರ್ಶಿ ಸೇರಿ ಕಳಪೆ ವಸ್ತುಗಳನ್ನು ಬಳಸಿ ಶೌಚಾಲಯ ನಿರ್ಮಿಸಿದ್ದರು. ಕಳಪೆ ಗುಣಮಟ್ಟದ ಶೌಚಾಲಯ ನಿರ್ಮಿಸಿರುವುದರಿಂದಲೇ ಮಗನ ಸಾವಾಗಿದೆ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಆದರೆ ಆರೊಪಿಗಳ ವಿರುದ್ಧ ಪೊಲೀಸರು ಇನ್ನೂ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಇದನ್ನೂ ಓದಿ: ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ದರ್ಪ ಮೆರೆದ ವ್ಯಕ್ತಿ!