– 6 ತಿಂಗಳಿನಲ್ಲಿ 49.6 ಕೆಜಿ ಚಿನ್ನ ಭಾರತಕ್ಕೆ ತಂದಿದ್ದಳಂತೆ ರನ್ಯಾ
ಬೆಂಗಳೂರು: ದುಬೈನಿಂದ ಚಿನ್ನ ತಂದು ಪರಪ್ಪನ ಅಗ್ರಹಾರ ಸೇರಿರುವ ರನ್ಯಾ ರಾವ್(Ranya Rao) ಕೇಸ್‌ನಲ್ಲಿ ದಿನಕ್ಕೊಂದು ತಿರುವು ಸಿಗ್ತಿದೆ. `ಮಾಣಿಕ್ಯ’ ಬೆಡಗಿಯ ಕಳ್ಳಸಾಗಾಣಿಕೆಗೆ ಬಳಸುತ್ತಿದ್ದ ಕೋಡ್‌ವರ್ಡ್‌ಗಳ ರಹಸ್ಯ ಬಯಲಾಗಿದೆ.
ಕಳೆದ 5 ತಿಂಗಳಿನಲ್ಲಿಯೇ ಗೋಲ್ಡ್ ರಾಣಿ ದುಬೈನಿಂದ(Dubai) ಕದ್ದು ತಂದಿರುವ ಚಿನ್ನದ ಲೆಕ್ಕ ಕೇಳಿದ್ರೆ ನಿಬ್ಬೆರಗಿಸುತ್ತೆ. ಹೌದು, ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್(Gold Smuggling) ಕೇಸ್ ತನಿಖೆ ಮಾಡುತ್ತಿರುವ ಡಿಆರ್‌ಐ(DRI) ಅಧಿಕಾರಿಗಳು ಹಲವು ಸಂಗತಿಗಳನ್ನ ಬಯಲಿಗೆಳೆದಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಹವಾಲ ನಂಟಿನ ಬಗ್ಗೆ ಸಾಕ್ಷ್ಯ ಕಲೆಹಾಕಿದ್ದಾರೆ. ರನ್ಯಾರಾವ್ ಮೊಬೈಲ್‌ನಲ್ಲಿ ಸೇವ್ ಆಗಿದ್ದ ಆ ಒಂದು ನಂಬರ್‌ನಿಂದ ಚಿನ್ನ ಕಳ್ಳಸಾಗಾಣಿಕೆಯ ಸ್ಫೋಟಕ ರಹಸ್ಯ ಹೊರಬಂದಿದೆ. ಇದನ್ನೂ ಓದಿ: ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್
ರನ್ಯಾ ಮೊಬೈಲ್‌ನಲ್ಲಿ `ಎಯು ಬೆಂಗಳೂರು ಡಿಸ್ಪ್ಯಾಚ್ ನ್ಯೂಟನ್’ ಎಂಬ ಹೆಸರಿನಲ್ಲಿ ಒಂದು ನಂಬರ್ ಸೇವ್ ಆಗಿತ್ತು. ಆ ನಂಬರ್‌ನ ಮೂಲಕವೇ ರನ್ಯಾ ಮತ್ತು ಸಾಹಿಲ್ ಮೆಸೇಜ್ ಮಾಡುತ್ತಿದ್ದರು. ಅಲ್ಲದೇ ಸ್ಮಗ್ಲಿಂಗ್ ನಡೆಸಲು ಐದು ಸ್ಟೆಪ್‌ಗಳನ್ನು ಫಾಲೋ ಮಾಡಿದ್ದರು ಎಂಬ ವಿಚಾರವೂ ಗೊತ್ತಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರು ಚರ್ಚೆ ಮಾಡಿಲ್ಲ: ಸತೀಶ್ ಜಾರಕಿಹೊಳಿ
ಅದರಲ್ಲಿ ಮೊದಲನೇಯ ಹಂತ ಇನೀಶಿಯೇಷನ್ ಆದ್ರೆ, ಎರಡನೇಯದು ಕಮ್ಯೂನಿಕೇಷನ್, ಮೂರನೇಯದು ಅಥನ್ಟಿಕೇಷನ್, ಇನ್ನೂ ನಾಲ್ಕುನೇಯದು ಡೆಲಿವರಿ, ಕೊನೆಯದ್ದು ಸೆಟಲ್‌ಮೆಂಟ್. ಈ 5 ಸ್ಟೆಪ್ ಮೂಲಕ ಗೋಲ್ಡ್ ಗ್ಯಾಂಗ್ ಚಿನ್ನ ನೀಡಿ ಹಣ ಪಡೆದು ಸೆಟಲ್‌ಮೆಂಟ್ ಮಾಡಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ರನ್ಯಾರಾವ್ ಚಿನ್ನ ಸಾಗಾಟ ಮತ್ತು ಮಾರಾಟದ ನಡುವೆ ಅವಿನಾಶ್ ಎಂಬಾತ ಭಾಗಿಯಾಗಿದ್ದ ಬಗ್ಗೆ ಅಧಿಕಾರಿಗಳಿಗೆ ಸಾಕ್ಷಿ ಸಿಕ್ಕಿದೆ. ರನ್ಯಾ ಈ ಹಿಂದೆ ಅವಿನಾಶ್ ಜೊತೆಗೆ ಸಾಕಷ್ಟು ಬಾರಿ ವ್ಯವಹಾರ ನಡೆಸಿರುವುದು ಗೊತ್ತಾಗಿದೆ. ರನ್ಯಾ ಅವಿನಾಶ್ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ತಿಳಿಸಿದ ನಂತ್ರ ಸಾಹಿಲ್ ಜೈನ್ ಪ್ರವೇಶ ಮಾಡ್ತಿದ್ದ. ಕಳೆದ ನವೆಂಬರ್ ನವೆಂಬರ್ ಒಂದರಂದು ಮೊದಲ ಬಾರಿಗೆ ರನ್ಯಾ ಹಾಗೂ ಸಾಹಿಲ್ ಸಂಪರ್ಕ ವಾಗುತ್ತೆ. ಅಲ್ಲದೆ ರನ್ಯಾ ರಾವ್ ಒಮ್ಮೆ ಸಾಹಿಲ್ ಜೈನ್ ನಡೆಸುತಿದ್ದ ಚಿನ್ನದ ಅಂಗಡಿಗೆ ಹೋಗಿ ಡಿಲಿವರಿ ಮಾಡಿದ್ದು ತನಿಖೆಯಿಂದ ಬಹಿರಂಗವಾಗಿದೆ. ಜೊತೆಗೆ ರನ್ಯಾ ರಾವ್ ಕಳೆದ ಆರು ತಿಂಗಳಿನಲ್ಲಿ ಬರೊಬ್ಬರಿ 49.6 ಕೆಜಿ ಚಿನ್ನ ಭಾರತಕ್ಕೆ ತಂದಿದ್ದಳಂತೆ. ಇದನ್ನೂ ಓದಿ: IPL 2025 | ಸಿಎಸ್‌ಕೆ ತಂಡಕ್ಕೆ ಮತ್ತೆ ಲೆಜೆಂಡ್ ಮಹಿ ಕ್ಯಾಪ್ಟನ್?
ನವೆಂಬರ್ 2024
8 ಕೆ ಜಿ 981 ಗ್ರಾಂ ಚಿನ್ನದ ಗಟ್ಟಿ
6 ಕೋಟಿ 82 ಲಕ್ಷ ಮೌಲ್ಯ
6 ಕೋಟಿ 50 ಲಕ್ಷ ಹಣ ದುಬೈಗೆ ಹವಾಲ
32 ಲಕ್ಷ ರನ್ಯಾರಾವ್ ಕಮಿಷನ್ ಲಾಭ
ಡಿಸೆಂಬರ್ 2024
12 ಕೆಜಿ 621 ಗ್ರಾಂ ಚಿನ್ನ
9 ಕೋಟಿ 94 ಲಕ್ಷ ಮೌಲ್ಯ
9 ಕೋಟಿ 64 ಲಕ್ಷ ದುಬೈಗೆ ಹವಾಲ
32 ಲಕ್ಷ ರನ್ಯಾರಾವ್ ಕಮಿಷನ್ ಲಾಭ
ಜನವರಿ 2025
14 ಕೆ ಜಿ 562 ಗ್ರಾಂ ಚಿನ್ನ
11 ಕೋಟಿ 56 ಲಕ್ಷ ಮೌಲ್ಯ
11 ಕೋಟಿ 10 ಲಕ್ಷ ದುಬೈಗೆ ಹವಾಲ
55 ಲಕ್ಷ ರನ್ಯಾರಾವ್ ಕಮಿಷನ್ ಲಾಭ
ಫೆಬ್ರವರಿ 2025
13 ಕೆಜಿ 433 ಗ್ರಾಂ ಚಿನ್ನ
11 ಕೋಟಿ 81 ಲಕ್ಷ ಮೌಲ್ಯ
11 ಕೋಟಿ 25 ದುಬೈಗೆ ಹವಾಲ ಹಣ
56 ಲಕ್ಷ ರನ್ಯಾರಾವ್ ಗೆ ಕಮಿಷನ್ ಲಾಭ
ಮಾರ್ಚ್ 2025
14 ಕೆ ಜಿ 213 ಗ್ರಾಂ ಚಿನ್ನ
13 ಕೋಟಿ ಚಿನ್ನದ ಮೌಲ್ಯ
11 ಕೋಟಿ ಹವಾಲ ಮೂಲಕ ದುಬೈಗೆ
ಮಾರ್ಚ್ 03 ರಂದು ಸಿಕ್ಕಿಬಿದ್ದ ರನ್ಯಾರಾವ್
ಆಖI ಅಧಿಕಾರಿಗಳಿಂದ ರನ್ಯಾರಾವ್ ಬಂಧನ