ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪೂಂಚ್ ಜಿಲ್ಲೆಯಲ್ಲಿ ಉಗ್ರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಐವರು ಯೋಧರು (Five Soldiers ) ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಗುರುವಾರ ಮಧ್ಯಾಹ್ನ 3:45ಕ್ಕೆ ರಾಜೌರಿಯ ಪೂಂಚ್ ಪ್ರದೇಶದಲ್ಲಿ ಡೇರಾ ಕಿ ಗಲಿ ಮೂಲಕ ಸಾಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಎನ್‌ಕೌಂಟರ್ ಆರಂಭವಾಗಿದೆ. ಇದನ್ನೂ ಓದಿ: ಹರಿಣರ ಬೇಟೆಯಾಡಿ ಸರಣಿ ಗೆದ್ದ ಭಾರತ – ಧೋನಿ ಟ್ರೆಂಡ್ ಮುಂದುವರಿಸಿದ ಕೆ.ಎಲ್ ರಾಹುಲ್
Advertisement
#WATCH | Security forces are conducting a search operation in the forest area of Dera ki Gali in the Rajouri sector after the terrorist attack on Army vehicles yesterday pic.twitter.com/V56EjGzfC2
— ANI (@ANI) December 22, 2023
Advertisement
ಬುಧವಾರ ರಾತ್ರಿಯಿಂದ ಡಿಕೆಜಿ ಪ್ರದೇಶ ಎಂದು ಕರೆಯಲ್ಪಡುವ ಡೇರಾ ಕಿ ಗಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರದೇಶವು ಭಯೋತ್ಪಾದಕರ ತಾಣವಾಗಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಸೇನೆಯ ಮೇಲೆ ಪ್ರಮುಖ ದಾಳಿಗಳು ಈ ಭಾಗದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2ಗೆ ವಿಶ್ವದ ಸುಂದರ ವಿಮಾನ ನಿಲ್ದಾಣ ಗೌರವ
Advertisement
ಕಳೆದ ಎರಡು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ 35ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.
Advertisement