ತಿರುವನಂತಪುರಂ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (PFI) ಕೇರಳದ (Kerala) ಐವರು ಆರ್‌ಎಸ್‌ಎಸ್ (RSS) ನಾಯಕರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರಿಗೆ Y ವರ್ಗದ ಭದ್ರತೆಯನ್ನು ನೀಡಿದೆ.
ಇತ್ತೀಚೆಗೆ ಪಿಎಫ್‌ಐ ಕಾರ್ಯಕರ್ತರ ಮನೆ, ಕಚೇರಿ ಮೇಲೆ ಎನ್‌ಐಎ (NIA) ನಡೆಸಿತ್ತು. ಈ ಸಮಯದಲ್ಲಿ ಕೇರಳದ ಪಿಎಫ್‌ಐ ಸದಸ್ಯ ಮೊಹಮ್ಮದ್ ಬಶೀರ್ ಮನೆ ಮೇಲೂ ದಾಳಿ ನಡೆಸಿತ್ತು. ಈ ವೇಳೆ ಬಶೀರ್ ಮನೆಯಿಂದ ಐವರು ಆರ್‌ಎಸ್‌ಎಸ್ ನಾಯಕರ ಹೆಸರುಗಳ ಪಟ್ಟಿಯು ಪಿಎಫ್‌ಐ ರಾಡಾರ್‌ನಲ್ಲಿ ಪತ್ತೆ ಆಗಿತ್ತು.
Advertisement
Advertisement
ಈ ಹಿನ್ನೆಲೆಯಲ್ಲಿ ಕೇರಳದ ಆರ್‌ಎಸ್‌ಎಸ್ ನಾಯಕರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್)ಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಶನಿವಾರ ಐವರು ಆರ್‌ಎಸ್‌ಎಸ್ ನಾಯಕರಿಗೆ ಭದ್ರತೆಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಹತ್ಯೆ, ಗಲಭೆಗೆ ತರಬೇತಿ ನಡೆಯುತ್ತಿದ್ದ ಹಾಲ್‍ಗೆ ಬೀಗ ಮುದ್ರೆ
Advertisement
ಎನ್‌ಐಎ, ಇಂಟೆಲಿಜೆನ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಕೇರಳದ ಐದು ಆರ್‌ಎಸ್ಎಸ್ ನಾಯಕರಿಗೆ ವೈ ವರ್ಗದ ಭದ್ರತೆಯನ್ನು ನೀಡಲಾಗುವುದು. ಆರ್‌ಎಸ್‌ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದೆ.
Advertisement
ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ನಿಷೇಧ ಮಾಡಿ ಗೃಹ ಸಚಿವಾಲಯ(Ministry of Home Affairs) ಗುರುವಾರ ಆದೇಶ ಪ್ರಕಟಿಸಿತ್ತು. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI