ರಾಂಚಿ: ಜಾರ್ಖಂಡ್‌ನ (Jharkhand) ಸಿಂಗ್‌ಭೂಮ್ (Singhbhum) ಜಿಲ್ಲೆಯಲ್ಲಿ ಮಾವೋವಾದಿಗಳು (Maoists) ನೆಲದಲ್ಲಿ ಹುದುಗಿಸಿಟ್ಟ 5 ಶಕ್ತಿಶಾಲಿ ಸ್ಫೋಟಕ ಸಾಧನಗಳನ್ನು (IED) ಭದ್ರತಾಪಡೆಗಳು (Security Force) ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿವೆ.
ಜಿಲ್ಲೆಯಲ್ಲಿ ಸಿಪಿಐ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ತುಂಬಹಕ ಗ್ರಾಮದ ಬಳಿಯ ಅರಣ್ಯದಿಂದ 20 ಕೆಜಿ ಮತ್ತು 12 ಕೆಜಿ ಸೇರಿದಂತೆ 4 ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಚೋಟಾ ಕುಯಿರಾ ಮತ್ತು ಮರಡಿರಿ ಗ್ರಾಮಗಳ ನಡುವೆ ಅರಣ್ಯ ಪ್ರದೇಶದಲ್ಲಿ ಹುದುಗಿಸಿಟ್ಟಿದ್ದ 5 ಕೆಜಿ ಐಇಡಿಯನ್ನು ಬಾಂಬ್ ನಿಷ್ಕ್ರಿಯ ದಳ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಆಂಟಿ ಮನೆಗೆ ತಲುಪಿದ ಬಳಿಕ ತಂದೆಗೆ ಕರೆ- ಸಾಹಿಲ್ ಸಿಕ್ಕಿಬಿದ್ದಿದ್ದು ಹೇಗೆ?
Advertisement
Advertisement
ಮಿಸಿರ್ ಬೆಸ್ರಾ ಸೇರಿದಂತೆ ಉನ್ನತ ಮಾವೋವಾದಿ ನಾಯಕರು ಈ ಜಾಗದಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರು ಮಾಹಿತಿ ಪಡೆದು ಸಿಆರ್‌ಪಿಎಫ್, ಕೋಬ್ರಾ ಮತ್ತು ಜಾರ್ಖಂಡ್ ಜಾಗ್ವಾರ್ ಜೊತೆಗೆ ಜಿಲ್ಲಾ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇದನ್ನೂ ಓದಿ: ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಬಸ್ – 10 ಮಂದಿ ಸಾವು, 55 ಮಂದಿಗೆ ಗಾಯ
Advertisement
Advertisement
ಜನವರಿಯಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ 10 ವರ್ಷದ ಬಾಲಕ ಮತ್ತು ಇಬ್ಬರು ವೃದ್ಧ ಮಹಿಳೆಯರು ಸೇರಿದಂತೆ ಎಂಟು ಗ್ರಾಮಸ್ಥರು ಸಾವನ್ನಪ್ಪಿದ್ದರು. ಅಲ್ಲದೇ ಸಿಆರ್‌ಪಿಎಫ್ ಸಿಬ್ಬಂದಿ ಸೇರಿದಂತೆ ಸುಮಾರು 20 ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಅಪಾಚಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ – ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ