LatestLeading NewsMain PostNational

ಯುಪಿಯಲ್ಲಿ ಬಿಜೆಪಿ ಆಡಳಿತದಲ್ಲಿ 5 ಲಕ್ಷ ಸರ್ಕಾರಿ ಉದ್ಯೋಗ ನೀಡಲಾಗಿದೆ: ಮೋದಿ

ಲಕ್ನೋ: ಉತ್ತರ ಪ್ರದೇಶದ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಸರ್ಕಾರಗಳು 10 ವರ್ಷಗಳಲ್ಲಿ ಕೇವಲ ಎರಡು ಲಕ್ಷ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದೆ. ಆದರೆ ಯೋಗಿ ಆದಿತ್ಯನಾಥ್ ಸರ್ಕಾರ ಐದು ವರ್ಷಗಳಲ್ಲಿ ಐದು ಲಕ್ಷ ಮಂದಿಗೆ ಉದ್ಯೋಗ ನೀಡಿದೆ ಎಂದು ವಿರೋಧ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಯಾಗ್‍ರಾಜ್ ರ್‍ಯಾಲಿಯನ್ನುದ್ದೇಶಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಮತ್ತೆ ಉದ್ಯೋಗದ ಹೆಸರಿನಲ್ಲಿ ರಾಜ್ಯದ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರು 10 ವರ್ಷಗಳಲ್ಲಿ ಕೇವಲ ಎರಡು ಲಕ್ಷ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದ್ದಾರೆ. ಅದು ಕೂಡ ಸ್ವಜನಪಕ್ಷಪಾತ (ಭಾಯಿ-ಭಟಿಜವಾದ್), ಜಾತಿವಾದ ಮತ್ತು ಭ್ರಷ್ಟಾಚಾರದ ಆಧಾರದ ಮೇಲೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

ಬಿಜೆಪಿ ಅಧಿಕಾರಾವಧಿಯಲ್ಲಿ ನೀಡಲಾದ ಉದ್ಯೋಗಗಳು ವಿರೋಧ ಪಕ್ಷಗಳು ಅಳವಡಿಸಿಕೊಂಡ ಮಾನದಂಡಗಳನ್ನು ಆಧರಿಸಿಲ್ಲ. ಬದಲಿಗೆ ಬಡವರ ಮಕ್ಕಳಿಗೆ ಪೂರ್ಣ ಪಾರದರ್ಶಕತೆಯೊಂದಿಗೆ ಉದ್ಯೋಗಗಳನ್ನು ನೀಡಲಾಗಿದೆ. ಅಲ್ಲದೇ ಹಿಂದೆ ಇದ್ದ ಸರ್ಕಾರ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಡಿದ ಆಟಗಳಿಂದ ರಾಜ್ಯದ ಅರ್ಹ ಯುವಕರ ಜೀವನವನ್ನು ನಾಶಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮುನ್ನ ಉತ್ತರ ಪ್ರದೇಶದ ಪಿಸಿಎಸ್ ಪರೀಕ್ಷೆಯ ಪಠ್ಯಕ್ರಮವು ಯುಪಿಎಸ್‍ಸಿಗಿಂತ ಭಿನ್ನವಾಗಿತ್ತು. ನಮ್ಮ ಸರ್ಕಾರ ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಇಂದು ಪಿಸಿಎಸ್ ಮತ್ತು ಯುಪಿಎಸ್‍ಸಿಯ ಪಠ್ಯಕ್ರಮ ಒಂದೇ ಆಗಿದೆ. ಈಗ ಅದೇ ಕಠಿಣ ಪರಿಶ್ರಮದಿಂದ ಯುವಕರು ಎರಡೂ ಪರೀಕ್ಷೆಗಳನ್ನು ಬರೆಯಬಹುದು ಎಂದಿದ್ದಾರೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ

Leave a Reply

Your email address will not be published.

Back to top button