ಜೈಪುರ: ಓವರ್‍ಲೋಡ್ ಆಗಿದ್ದ ಲಾರಿಯೊಂದು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಇಲ್ಲಿನ ಚೋಮು ಹೌಸ್ ಸರ್ಕಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ರಾಹುಲ್, ರೋಶಿನಿ, ಜ್ಯೋತಿ, ನಿತೇಶ್ ಹಾಗೂ ಸ್ವೀಟಿ ಎಂದು ಗುರುತಿಸಲಾಗಿದೆ.
ಘಟನೆ ನಡೆದ ಕೂಡಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಬಿದ್ದ ಪರಿಣಾಮ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿ ಮೃತದೇಹಗಳನ್ನು ಹೊರತೆಗೆಯುವುದೇ ಕಷ್ಟವಾಯ್ತು ಎಂದು ಪೊಲೀಸ್ ಅಧಿಕಾರಿ ಕಮಲ್ ನಯನ್ ಹೇಳಿದ್ದಾರೆ.
ಲಾರಿಯಲ್ಲಿ ಉಪ್ಪಿನ ಮೂಟೆಗಳನ್ನ ಕೊಂಡೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.