ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru Traffic) ಸಮಸ್ಯೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಮಸ್ಯೆ ನಿವಾರಣೆಗೆ ಅಂತಾ ಬಿಬಿಎಂಪಿ ಫ್ಲೈಓವರ್ ಗಳನ್ನ ನಿರ್ಮಾಣ ಮಾಡಿದೆ. ಈಗ ಮತ್ತೆ ಹೊಸದಾಗಿ ನಗರದಲ್ಲಿ ನಾಲ್ಕೈದು ಫ್ಲೈಓವರ್ (Fly Over) ನಿರ್ಮಾಣಕ್ಕೆ ಪ್ಲಾನ್ ಮಾಡಿದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಸಂಚಾರ ದಟ್ಟಣೆ ದಟ್ಟವಾಗಿದೆ. ಪ್ರಪಂಚದಲ್ಲೆ ಸಂಚಾರ ದಟ್ಟಣೆ ವಿಚಾರದಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಇದೆ. ಈ ಕುಖ್ಯಾತಿಯಿಂದ ಹೊರಬರಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸ ಪಡ್ತಿದೆ.. ನಗರದಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆ ಮಾಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡ್ತಾ ಇದ್ದಾರೆ. ಬಿಬಿಎಂಪಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶತ ಪ್ರಯತ್ನ ಮಾಡ್ತಾ ಇದೆ. ಆ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‍ನಲ್ಲಿ ಬಿಬಿಎಂಪಿ ಈ ವರ್ಷ ಹೊಸ ಐದು ಫ್ಲೈಓವರ್‍ಗಳ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಅಂತಾನೇ 200ಕ್ಕೂ ಹೆಚ್ಚು ಕೋಟಿ ಮೀಸಲಿಟ್ಟಿದೆ. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಒಡೆಯಲು ಸುಮಲತಾ ರಣತಂತ್ರ
ಬೆಂಗಳೂರಿನ ಪಶ್ಚಿಮ ವಲಯ, ದಾಸರಹಳ್ಳಿ ವಲಯ ಮತ್ತು ಯಲಹಂಕ ವಲಯಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಆಗ್ತಿದೆ. ಭಾಗಗಳನ್ನ ಗುರುತಿಸಿ ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದೆ. ಎಷ್ಟೆಷ್ಟು ವೆಚ್ಚದಲ್ಲಿ ಎಲ್ಲೆಲ್ಲಿ ಫ್ಲೈ ಓವರ್ ನಿರ್ಮಾಣ ಆಗ್ತಿದೆ ಅಂತಾ ನೋಡೋದಾದ್ರೆ..
> ಮತ್ತಿಕೆರೆ ತಿರುವಿನ ಗೋಕುಲ್ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣ – 40 ಕೋಟಿ ವೆಚ್ಚ
> ಜಾಲಹಳ್ಳಿ ಬಳಿಯ ಓಆರ್‍ಆರ್ ಪೈಪ್‍ಲೈನ್ ಬಳಿ ಫ್ಲೈ ಓವರ್ – 40 ಕೋಟಿ ವೆಚ್ಚ
> ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಿಂದ ಜಯಮಹಲ್ ರಸ್ತೆವರೆಗೂ ಫ್ಲೈ ಓವರ್ – 65 ಕೋಟಿ
> ಸದಾಶಿವನಗರ ಪೊಲೀಸ್ ಸ್ಟೇಷನ್ ಸರ್ಕಲ್ ಬಳಿ ಫ್ಲೈ ಓವರ್ – 40 ಕೋಟಿ
> ಯಲಹಂಕ ರೈತ ಸಂತೆ ಬಳಿ ಅಂಡರ್ ಪಾಸ್
ಐದು ಫ್ಲೈ ಓವರ್‍ಗಳ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದು, ಈ ವರ್ಷದಲ್ಲಿ ಕೆಲಸ ಮುಗಿಸೋ ಕಾಮಗಾರಿ ಕಂಪ್ಲೀಟ್ ಮಾಡೋ ಪ್ಲಾನ್ ಮಾಡಿದ್ದಾರೆ. ಈ ವರ್ಷ ಒಳಗೆ ಫ್ಲೈ ಓವರ್ ನಿರ್ಮಾಣ ಮಾಡ್ತಾರಾ ಇಲ್ವಾಕಾದು ನೋಡಬೇಕಿದೆ.