ಲಕ್ನೋ: ಧಾರ್ಮಿಕ ಮೆರವಣಿಗೆ (Procession) ವೇಳೆ ವಿದ್ಯುತ್ ಸ್ಪರ್ಶಿಸಿ (Electrocution) ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್ (Bahraich) ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ವರದಿಗಳ ಪ್ರಕಾರ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯ ಗಾಡಿಗೆ ಅಳವಡಿಸಲಾಗಿದ್ದ ಹೈಟೆನ್ಷನ್ ತಂತಿಯ ಕಬ್ಬಿಣದ ರಾಡ್ ಅನ್ನು ವ್ಯಕ್ತಿಯೊಬ್ಬರು ಸ್ಪರ್ಶಿಸಿದ್ದಾರೆ. ಬಳಿಕ ಇನ್ನೂ ನಾಲ್ವರಿಗೆ ವಿದ್ಯುತ್ ಸ್ಪರ್ಶವಾಗಿದೆ. ಇದನ್ನೂ ಓದಿ: ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್
ವಿದ್ಯುತ್ ಸ್ಪರ್ಶವಾದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೊನೆಯ ವ್ಯಕ್ತಿಯನ್ನು ಚಿಕಿತ್ಸೆಗೆಂದು ಲಕ್ನೋಗೆ ಸಾಗಿಸುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 2024ರೊಳಗೆ UPಯ ರಸ್ತೆಗಳನ್ನು ಅಮೆರಿಕಗಿಂತಲೂ ಉತ್ತಮಗೊಳಿಸುತ್ತೇವೆ: ಗಡ್ಕರಿ
ಬಹ್ರೈಚ್‌ನಲ್ಲಿ ನಡೆದ ದುರ್ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಸೂಚನೆಯನ್ನೂ ನೀಡಿದ್ದಾರೆ.