ಹೈದರಾಬಾದ್: ತೆಲಂಗಾಣದ ಗೋದಾವರಿ ನದಿ ಪಾತ್ರದ ಬಳಿ 5.3 ತೀವ್ರತೆಯಲ್ಲಿ ಭೂಕಂಪನವಾಗಿದೆ.
ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
Advertisement
Advertisement
NCS ಪ್ರಕಾರ, ಕಂಪನವು ಬುಧವಾರ ಬೆಳಗ್ಗೆ 7:27 ರ ಸುಮಾರಿಗೆ ದಾಖಲಾಗಿದೆ. 40 ಕಿಮೀ ಆಳದಲ್ಲಿ ಮುಲುಗು ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಹಲವು ವರ್ಷಗಳ ನಂತರ ಅಪರೂಪದ ಭೂಕಂಪನ ಸಂಭವಿಸಿದೆ.
Advertisement
ಈ ಭಾಗಕ್ಕೆ ಇದು ತೀವ್ರ ಭೂಕಂಪನ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಹಾನಿ ಸಂಭವಿಸಿಲ್ಲ.