ಮಡಿಕೇರಿ: ಜುಲೈ ತಿಂಗಳ ಕಂಟಕ ಮುಗಿಯಿತು. ಮಳೆಗಾಲದಿಂದ ಸ್ವಲ್ಪ ಸೇಫ್ ಎಂದುಕೊಂಡಿದ್ದ ಕೊಡಗಿನ (Kodagu) ಜನರಿಗೆ ಇದೀಗ ಜಿಲ್ಲಾಡಳಿತ ಶಾಕ್ ನೀಡಿದೆ. ಮುಂಬರುವ ಆಗಸ್ಟ್ ತಿಂಗಳಲ್ಲಿ ಸುರಿಯುವ ಮಹಾಮಳೆಗೆ ಜಿಲ್ಲೆಯ 48 ಜಾಗಗಳು ಭೂಕುಸಿತ ವಲಯ ಎಂದು ಗುರುತು ಮಾಡಿದೆ. ಹೀಗಾಗಿ ಇದೀಗ ಗುಡ್ಡಗಾಡು ಜನರಿಗೆ 2018-19ರ ಕಹಿ ದಿನಗಳು ಮತ್ತೆ ಮರುಕಳಿಸುತ್ತಾ ಎನ್ನೋ ಆತಂಕ ಎದುರಾಗಿದೆ.
Advertisement
ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಬಂದರೆ ಸಾಕು, ನಗರ ಪ್ರದೇಶದ ಜನರಿಂದ ಗುಡ್ಡಗಾಡು ನದಿ ಪಾತ್ರದ ಜನರಿಗೆ ಒಂದಲ್ಲಾ ಒಂದು ಆತಂಕ ಎದುರಾಗಿ ಬಿಡುತ್ತದೆ. ಆದರೂ ಇದೀಗ ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳ ಮಳೆಯಿಂದ (Rain) ಪಾರಾಗಿದ್ದ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಮುಂಬರುವ ಆಗಸ್ಟ್ ತಿಂಗಳ ಮಳೆಗೆ ಜಿಲ್ಲೆಯ 48 ಕಡೆ ಭೂಕುಸಿತ ಹಾಗೂ 44 ಕಡೆಯಲ್ಲಿ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಹೀಗಾಗಿ ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ.
Advertisement
Advertisement
ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆ ನೀಡಿದೆ. 2018-19ರಲ್ಲಿ ಭೀಕರ ಜಲ ಪ್ರವಾಹ ಉಂಟಾಗಿ ಬೆಟ್ಟ, ರಸ್ತೆಗಳು ಕುಸಿದು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಜನ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡಿದ್ದರು. ಆ ಭೀತಿ ಜನರಲ್ಲಿ ಮಾಸುವ ಮುನ್ನವೇ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ನೈತಿಕ ಪೊಲೀಸ್‌ಗಿರಿ – ಇಬ್ಬರು ಅರೆಸ್ಟ್
Advertisement
2018 ರಿಂದ ನಿರಂತರವಾಗಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಭೂಕುಸಿತ ಪ್ರವಾಹ ಜಲಸ್ಫೋಟ, ಸರಣಿ ಭೂಕಂಪಗಳು ಕಳೆದ ವರ್ಷದವರೆಗೂ ಆಗಿರುವುದನ್ನು ಗಮನಿಸಿದ್ದೇವೆ. ಈ ಬಾರಿಯೂ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಲಕ್ಷಣಗಳು ಇರುವುದರಿಂದ ಜಿಲ್ಲಾಡಳಿತ ಪ್ರವಾಹ ಹಾಗೂ ಭೂಕುಸಿತ ಪ್ರದೇಶಗಳನ್ನು ಪಟ್ಟಿ ಮಾಡಿದೆ. ಅಷ್ಟೇ ಅಲ್ಲದೇ ಮಳೆಗಾಲ ಸಮಯದಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸ್ಥಳಗಳನ್ನು ಗುರುತು ಮಾಡಿ ತಡೆಗೋಡೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸುಮಾರು 20 ಕೋಟಿ ರೂ. ಅನುದಾನ ಮಂಜೂರು ಮಾಡುವುದಾಗಿ ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಇದಕ್ಕೆಲ್ಲ ಪುಷ್ಟಿ ನೀಡುವಂತೆ ಜಿಲ್ಲಾಡಳಿತ ಇದೀಗ ಡೇಂಜರ್ ಝೋನ್ ವಲಯಗಳ ಪಟ್ಟಿ ಮಾಡಿದ್ದು ಗುಡ್ಡ ಕುಸಿತವಾಗುವ ಸ್ಥಳಗಳನ್ನು ಎನ್‌ಡಿಆರ್‌ಎಫ್ ತಂಡ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಸಿಬ್ಬಂದಿ ನಿಗಾದಲ್ಲಿಟ್ಟಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಗೆ ನುಗ್ಗಿ ತಮ್ಮ ಪಾಲಿನ ಅಕ್ಕಿ ಕೊಂಡೊಯ್ದ ಗ್ರಾಮಸ್ಥರು
ಒಟ್ಟಿನಲ್ಲಿ ಪ್ರವಾಹ, ಭೂಕುಸಿತದಿಂದ ಜುಲೈ ತಿಂಗಳ ಮಳೆಯಿಂದ ಹೇಗೋ ಪಾರಾಗಿದ್ದೇವೆ ಎಂದುಕೊಂಡಿದ್ದ ಗುಡ್ಡಗಾಡು ಜನರಿಗೆ ಈ ಬಾರಿ ಮತ್ತೆ ಭೂಕುಸಿತ ಅಥವಾ ಪ್ರವಾಹ ಎದುರಾಗಬಹುದು ಎಂದು ಜಿಲ್ಲಾಡಳಿತ ಸ್ಥಳಗಳನ್ನು ಗುರುತಿಸಿರುವುದರಿಂದ ಜನರು ಕಂಗಾಲಾಗುವಂತೆ ಮಾಡಿದೆ.
Web Stories