ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್ 50 ಸಾವಿರದತ್ತ ಮುಖಮಾಡಿದೆ. ಇಂದು ಬರೋಬ್ಬರಿ 47,754 ಹೊಸ ಕೇಸ್ ವರದಿಯಾಗಿದ್ದು, ಬೆಂಗಳೂರಿನಲ್ಲಿ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 30,540 ಕೇಸ್ ವರದಿಯಾಗಿದೆ.
Advertisement
ನಿನ್ನೆ 40,499 ಕೇಸ್ ವರದಿಯಾಗಿತ್ತು. ಅದು ಇಂದು 47 ಸಾವಿರಕ್ಕೂ ಅಧಿಕವಾಗಿ ಆತಂಕ ಮೂಡಿಸಿದೆ. ಇಂದು ಒಟ್ಟು 29 ಮಂದಿ ಮರಣ ಹೊಂದಿದ್ದು, ಬೆಂಗಳೂರಿನಲ್ಲಿ 8 ಮಂದಿ ಮರಣ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,00,000 ಏರಿಕೆ ಕಂಡಿದೆ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ
Advertisement
Advertisement
Daily new cases in Bengaluru cross 30k today:
◾New cases in State: 47,754
◾New cases in B'lore: 30,540
◾Positivity rate in State: 18.48%
◾Discharges: 22,143
◾Active cases State: 2,93,231 (B'lore- 200k)
◾Deaths:29 (B'lore- 08)
◾Tests: 2,58,290#COVID19 #OMICRON
— Dr Sudhakar K (@mla_sudhakar) January 20, 2022
Advertisement
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231ಕ್ಕೆ ತಲುಪಿದೆ. ಪಾಸಿಟಿವಿಟಿ ರೇಟ್ 18.48% ರಷ್ಟಿದ್ದು, ಇಂದು ವಿವಿಧ ಆಸ್ಪತ್ರೆಯಿಂದ 22,143 ಮಂದಿ ಬಿಡುಗಡೆಗೊಂಡಿದ್ದು, ಒಟ್ಟು 2,58,290 ಮಂದಿಗೆ ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಟೆಸ್ಟ್‌ಗೆ ಕಳುಹಿಸಿ 22 ದಿನದ ನಂತರ ಬಂತು ಒಮಿಕ್ರಾನ್ ವರದಿ – ಅಷ್ಟರಲ್ಲಿ ಗುಣಮುಖಳಾಗಿ ಡಿಸ್ಚಾರ್ಜ್ ಆಗಿದ್ಲು ಯುವತಿ!
ರಾಜ್ಯದಲ್ಲಿ ನಿನ್ನೆಗಿಂತ ಇಂದು ಪಾಸಿಟಿವ್ ಕೇಸ್‍ಗಳ ಸಂಖ್ಯೆ ಮತ್ತು ಮರಣ ಪ್ರಮಾಣ ಏರಿಕೆ ಕಂಡಿದ್ದು, ಪಾಸಿಟಿವಿಟಿ ರೇಟ್ ಮಾತ್ರ ಅಲ್ಪ ಇಳಿಕೆ ಕಂಡಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಬಾಗಲಕೋಟೆ 66, ಬಳ್ಳಾರಿ 952, ಬೆಳಗಾವಿ 442, ಬೆಂಗಳೂರು ಗ್ರಾಮಾಂತರ 974, ಬೆಂಗಳೂರು ನಗರ 30,540, ಬೀದರ್ 311, ಚಾಮರಾಜನಗರ 384, ಚಿಕ್ಕಬಳ್ಳಾಪುರ 522, ಚಿಕ್ಕಮಗಳೂರು 387, ಚಿತ್ರದುರ್ಗ 465, ದಕ್ಷಿಣ ಕನ್ನಡ 974, ದಾವಣಗೆರೆ 152, ಧಾರವಾಡ 698, ಗದಗ 289, ಹಾಸನ 1,840, ಹಾವೇರಿ 65, ಕಲಬುರಗಿ 658, ಕೊಡಗು 195, ಕೋಲಾರ 511, ಕೊಪ್ಪಳ 348, ಮಂಡ್ಯ 1,512, ಮೈಸೂರು 1,352, ರಾಯಚೂರು 329, ರಾಮನಗರ 150, ಶಿವಮೊಗ್ಗ 373, ತುಮಕೂರು 1,622, ಉಡುಪಿ 767, ಉತ್ತರ ಕನ್ನಡ 611, ವಿಜಯಪುರ 188 ಮತ್ತು ಯಾದಗಿರಿಯಲ್ಲಿ 80 ಪಾಸಿಟಿವ್ ಪ್ರಕರಣ ದಾಖಲಾಗಿದೆ.