ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್‍ನ ಎರಡನೇ ಪಂದ್ಯದಲ್ಲಿ ಟ್ರೈಲ್‍ಬ್ಲೇಜರ್ಸ್ ತಂಡ 9 ವಿಕೆಟ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ವೆಲಾಸಿಟಿ ತಂಡ ಎರಡನೇ ಪಂದ್ಯದಲ್ಲಿ ಸೋಲುಂಡಿದೆ.
ಇಂದು ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಟ್ರೈಲ್‍ಬ್ಲೇಜರ್ಸ್ ತಂಡದ ಬೌಲರ್ ಗಳಾದ ತಂಡದ ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಯಕ್ವಾಡ್ ಮತ್ತು ಜುಲಾನ್ ಗೋಸ್ವಾಮಿ ಅವರ ಮಾರಕ ದಾಳಿಗೆ ತತ್ತರಿಸಿ 47 ರನ್‍ಗಳಿಸಿ ಆಲೌಟ್ ಆಯ್ತು. ಈ ಗುರಿಯನ್ನು ಬೆನ್ನಟ್ಟಿದ ಟ್ರೈಲ್‍ಬ್ಲೇಜರ್ಸ್ ಆರಂಭದಲ್ಲಿ ನಾಯಕಿ ಸ್ಮೃತಿ ಮಂಧಾನ ವಿಕೆಟ್ ಕಳೆದುಕೊಂಡರೂ ನಂತರ ಇನ್ನು 12.1 ಓವರ್ ಬಾಕಿ ಇರುವಂತೆ 49 ರನ್ ಗಳಿಸಿ ಗೆದ್ದಿತು.
Advertisement
Advertisement
ವೆಲಾಸಿಟಿ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಲು ಬಂದ ಟ್ರೈಲ್‍ಬ್ಲೇಜರ್ಸ್ ತಂಡದ ನಾಯಕ ಸ್ಮೃತಿ ಮಂಧಾನ ನಾಲ್ಕನೇ ಓವರಿನಲ್ಲಿ ಕೇವಲ 6 ರನ್‍ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದರು. ನಂತರ ಜೊತೆಯಾದ ದಿಯಾಂಡ್ರಾ ಡೊಟಿನ್ ಮತ್ತು ರಿಚಾ ಘೋಷ್ ಔಟ್ ಆಗದೇ ಉಳಿದು ತಂಡವನ್ನು ಗೆಲ್ಲಿಸಿದರು. ಇದರಲ್ಲಿ ಡೊಟಿನ್ 28 ಬಾಲಿಗೆ 29 ರನ್‍ಗಳಿಸಿದರೆ, ಘೋಶ್ 10 ಬಾಲಿನಲ್ಲಿ 13 ರನ್ ಗಳಿಸಿ ಮಿಂಚಿದರು.
Advertisement
Advertisement
ಇದಕ್ಕೂ ಮೊದಲು ಬ್ಯಾಟ್ ಮಾಡಿದ ವೆಲಾಸಿಟಿ ತಂಡ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಆಡಿದರೂ ಎರಡನೇ ಪಂದ್ಯದಲ್ಲಿ ಎಡವಿತ್ತು. ಟ್ರೈಲ್‍ಬ್ಲೇಜರ್ಸ್ ತಂಡದ ಸೋಫಿ ಎಕ್ಲೆಸ್ಟೋನ್ (3 ಓವರ್, 9 ರನ್, 4 ವಿಕೆಟ್), ರಾಜೇಶ್ವರಿ ಗಯಕ್ವಾಡ್ (3 ಓವರ್, 13 ರನ್, 2 ವಿಕೆಟ್) ಮತ್ತು ಜುಲಾನ್ ಗೋಸ್ವಾಮಿ (3 ಓವರ್, 13 ರನ್, 2 ವಿಕೆಟ್) ಮಾರಕ ದಾಳಿಗೆ ತತ್ತರಿ ಕೇವಲ 15 ಓವರಿನಲ್ಲಿ ಅಲೌಟ್ ಆಗಿ 48 ರನ್‍ಗಳ ಗುರಿ ನೀಡಿತ್ತು.