Mandya | ಕೆಆರ್‌ಎಸ್‌ ಡ್ಯಾಂನಿಂದ ಕಾವೇರಿ ನದಿಗೆ 45,000 ಕ್ಯೂಸೆಕ್ ನೀರು

Public TV
1 Min Read
KRS DAM MYSURU

ಮಂಡ್ಯ: ಪ್ರತಿವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಜುಲೈ ತಿಂಗಳಲ್ಲಿ ಮುಂಗಾರು ಮಳೆ ಈ ಬಾರಿ ಜೂನ್ ತಿಂಗಳ ಮೊದಲ ವಾರದಲ್ಲಿಯೇ ಚುರುಕು ಪಡೆದುಕೊಂಡಿದೆ. ಇದರ ಪರಿಣಾಮ ಹಳೇ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯ (KRS Reservoir) 120.90 ಅಡಿಯಷ್ಟು ಭರ್ತಿಯಾಗಿದೆ. ಡ್ಯಾಂ ನಿರ್ಮಾಣವಾಗಿದ್ದಾಗಿನಿಂದ ಕೆಆರ್‌ಎಸ್ ಡ್ಯಾಂನಲ್ಲಿ ಜೂನ್ ತಿಂಗಳಲ್ಲೇ ಇಷ್ಟು ಪ್ರಮಾಣದ ನೀರು ಇರಲಿಲ್ಲ. ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ನೀರು ಜೂನ್ ತಿಂಗಳಿನಲ್ಲಿ ಸಂಗ್ರಹವಾಗಿದೆ.

ಇನ್ನೂ ಮತ್ತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು (Monsoon) ಚುರುಕುಗೊಂಡಿರುವ ಹಿನ್ನೆಲೆ 45 ಸಾವಿರ ಕ್ಯೂಸೆಕ್‌ಗೂ ನೀರು ಕೆಆರ್‌ಎಸ್ ಡ್ಯಾಂ ಬರುತ್ತಿದೆ. ಹೀಗಾಗಿ ಡ್ಯಾಂನಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇಂದು ಸಹ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚು ಬೀಳುವ ಸಾಧ್ಯತೆ ಇದ್ದು ಕನ್ನಂಬಾಡಿ ಕಟ್ಟೆಗೆ 50 ಸಾವಿರಕ್ಕೂ ಅಧಿಕ ಕ್ಯೂಸೆಕ್‌ಗೂ ಅಧಿಕ ಒಳಹರಿವು ಬರುವ ಸಾಧ್ಯತೆಯಿದೆ. ಆದ್ದರಿಂದ ಇಂದು ಡ್ಯಾಂನಿಂದ 50 ಸಾವಿರ ಕ್ಯೂಸೆಕ್‌ನ್ನು ಬಿಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕಬಿನಿಯಿಂದ 25 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ – ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರು ಬಿಡುಗಡೆ

ಡ್ಯಾಂನಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಸಲಾಗುತ್ತಿದ್ದು, ಕಾವೇರಿ ಕೊಳ್ಳದ ಜನರು ಎಚ್ಚಕೆಯಿಂದಿರುವಂತೆ ಕಾವೇರಿ ನೀರಾವರಿ ನಿಗಮ ಸೂಚಿಸಿದೆ. ಅಲ್ಲದೇ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದು, ನದಿಯಲ್ಲಿ ಪಿಂಡಪ್ರಧಾನವಕ್ಕೂ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಮೈಸೂರು| ಜಾನುವಾರು ರಕ್ಷಣೆ ಹೆಸರಿನಲ್ಲಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ಕೆಆರ್‌ಎಸ್ ಡ್ಯಾಂ ಭರ್ತಿಗೆ ಇನ್ನೂ 4 ಅಡಿ ಬಾಕಿ ಇರೋದು ಸಂತಸ ಒಂದು ಕಡೆಯಾದರೆ, ಇನ್ನೊಂದೆಡೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಹೆಚ್ಚಿರುವ ಕಾರಣ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇದನ್ನೂ ಓದಿ: ಬೆಳಗಾವಿ | ಭಾರೀ ಮಳೆಗೆ ಮುಳುಗಿತು ಹಬ್ಬಾನಟ್ಟಿ ಮಾರುತಿ ದೇವಸ್ಥಾನ – ಎಲ್ಲೆಲ್ಲಿ ಏನಾಗಿದೆ?

Share This Article