ಬೆಂಗಳೂರು: ಕೋವಿಡ್‌ನಿಂದ (Covid) ಮೃತಪಟ್ಟ ಕುಟುಂಬಗಳಿಗೆ ಈವರೆಗೂ 446 ಕೋಟಿ ರೂ. ಪರಿಹಾರ (Compensation) ವಿತರಣೆ ಮಾಡಲಾಗಿದ್ದು, ನೈಜತೆ ಆಧರಿಸಿ ಈಗಲೂ ಪರಿಹಾರ ನೀಡಿಕೆ ಮುಂದುವರಿಸಲಾಗಿದೆ. ರಾಜ್ಯ ಸರ್ಕಾರ 1 ಲಕ್ಷ ಕೇಂದ್ರದ 50 ಸಾವಿರ ಸೇರಿ ಒಟ್ಟು 1.5 ಲಕ್ಷ ರೂ. ಗಳನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್‌ನಿಂದ ಮೃತ ಎಂದು ಹೆಲ್ತ್ ಬುಲೆಟಿನ್‌ನಲ್ಲಿಯೇ ಬಂದಿದ್ದರೆ, ಆ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. 1 ಲಕ್ಷ ರೂ. ರಾಜ್ಯ ಸರ್ಕಾರದಿಂದ, 50 ಸಾವಿರ ರೂ. ಕೇಂದ್ರದಿಂದ ಕೊಡಲಾಗಿದೆ ಎಂದರು. ಇದನ್ನೂ ಓದಿ: ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ, ಆದ್ರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ ರವಿ
Advertisement
Advertisement
ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಹೆಸರು ಬಾರದೆ ಇದ್ದು, ನಂತರ ಮೃತರ ಕುಟುಂಬದವರು ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುತ್ತದೆ. ಆದರೆ ನೈಜತೆ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಅಲ್ಲಿ ಕೋವಿಡ್‌ನಿಂದ ಸಾವು ಎಂದು ಖಚಿತವಾದರೆ ಮಾತ್ರ ಪರಿಹಾರ ಕೊಡಲಾಗುತ್ತದೆ. ಈವರೆಗೂ ರಾಜ್ಯದಲ್ಲಿ 446 ಕೋಟಿ ರೂ. ಪರಿಹಾರ ಕೊಡಲಾಗಿದೆ ಎಂದರು.
Advertisement
ಬೆಂಗಳೂರಿನಲ್ಲಿ ಪರಿಹಾರಕ್ಕೆ 10,137 ಅರ್ಜಿಗಳು ಬಂದಿದ್ದವು. ಈ ಪೈಕಿ 3,450 ಬಿಪಿಎಲ್ ಪ್ರಕರಣಗಳಾಗಿವೆ. ಈಗಲೂ ಪರಿಹಾರ ಕೊಡಲಾಗುತ್ತಿದೆ. ಮೃತರಾದವರ ಕುಟುಂಬದವರಲ್ಲದವರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕೊಡಲು ಸಾಧ್ಯವಿಲ್ಲ. ಇದು ಸರ್ಕಾರದ ಹಣ, ದುರುಪಯೋಗ ತಡೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವವರ ಹೆಸರು ಮೃತ ವ್ಯಕ್ತಿಯ ಹೆಸರು ಇರುವ ಬಿಪಿಎಲ್ ಪಡಿತರ ಕಾರ್ಡ್ನಲ್ಲಿ ಇರುವುದು ಕಡ್ಡಾಯ ಎಂದರು. ಇದನ್ನೂ ಓದಿ: ಗ್ರಾಮಗಳ ಆಸ್ತಿ ಸರ್ವೆಗೆ ಡ್ರೋಣ್ ಸರ್ವೆ ಪ್ರಕ್ರಿಯೆ ನಡೆಯುತ್ತಿದೆ: ಅಶೋಕ್
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k