ಬೆಂಗಳೂರು: ಉತ್ತರ ತಾಲೂಕು ಜಾರಕಬಂಡೆ ಶ್ರೀಗಂಧದ ಕಾವಲ್ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರುವಶಕ್ಕೆ ಕೂಡಲೇ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64ಎ ಅಡಿ ಪ್ರಕ್ರಿಯೆ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಲಿಖಿತ ಸೂಚನೆ ನೀಡಿದ್ದಾರೆ.
ಈ ಸಂಬಂಧ ಅಪರ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಎರಡು ಪ್ರತ್ಯೇಕ ಸೂಚನೆ ನೀಡಿರುವ ಅವರು, ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ವಾಯುಪಡೆಗೆ ನೀಡಲಾಗಿದ್ದ 452 ಎಕರೆ 4ಳಿ ಗಂಟೆ ಭೂ ಮಂಜೂರಾತಿಯನ್ನು ರಾಜ್ಯ ಸರ್ಕಾರ 2017ರ ಅ.09ರಂದು ರದ್ದುಗೊಳಿಸಿದೆ. ಇದನ್ನು ಅತ್ಯಗತ್ಯವಾದ ಶ್ವಾಸತಾಣವಾಗಿ ಉಳಿಸಲು ತೀರ್ಮಾನಿಸಲಾಗಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಏರಿಸುತ್ತಿದೆ, ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡ್ತಿದೆ: ಡಿಕೆಶಿ ಕಳವಳ

ರಾಷ್ಟ್ರೀಯ ಹಿತದೃಷ್ಟಿಯಿಂದ ಭೂ ಮಂಜೂರಾತಿ ರದ್ದುಪಡಿಸಿದ ಬಳಿಕವೂ ಭಾರತೀಯ ವಾಯುಪಡೆ ಸದರಿ ಭೂಮಿಯನ್ನು ಬಳಸಲು, ಅರಣ್ಯ (ಸಂರಕ್ಷಣಾ) ಕಾಯ್ದೆ-1980ರಡಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪರ್ಯಾಯ ಭೂಮಿ ನೀಡುವಂತೆ ತಿಳಿಸಿದ್ದರೂ ನಿಯಮ ಉಲ್ಲಂಘಿಸಿದೆ. ಈ ನಿಟ್ಟಿನಲ್ಲಿ 64ಎ ನೋಟಿಸ್ ನೀಡಿ, ಒತ್ತುವರಿ ತೆರವು ಮಾಡಿಸಲು ಸೂಚಿಸಿದ್ದಾರೆ.
ಈ ಜಮೀನಿಗೂ ವಾಯುಪಡೆಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಈಶ್ವರ್ ಖಂಡ್ರೆ, ಇನ್ನು ಮುಂದೆ ಸದರಿ ಪ್ರದೇಶದಲ್ಲಿ ಅನಿವಾರ್ಯವಾಗಿ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ನಿಯಮಾನುಸಾರ ಅರಣ್ಯ ಇಲಾಖೆಯಿಂದ (ಪರಿವೇಶ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿ) ಅನುಮತಿ ಪಡೆಯುವಂತೆ ಸುತ್ತೋಲೆ ಹೊರಡಿಸಲು ಮತ್ತು ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲು ಕ್ರಮ ವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ.ಇದನ್ನೂ ಓದಿ: ಗುಜರಾತ್ಗೆ ಬಂತು 47,600 ಮೆಟ್ರಿಕ್ ಟನ್ LPG ಹೊತ್ತ `ಜಗ್ ವಸಂತ್’ ಹಡಗು

