ಚಂಡೀಗಢ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ, ಇದಕ್ಕೆ ಸಾಕ್ಷಿ 44 ವರ್ಷದ ತಾಯಿಯೊಬ್ಬರು ತನ್ನ 10 ನೇ ತರಗತಿಯ ಮಗನೊಂದಿಗೆ ಬೋರ್ಡ್ ಪರೀಕ್ಷೆ ಬರೆಯಲು ಹಾಜರಾಗಿರುವ ಘಟನೆ ಪಂಜಾಬ್‍ನ ಲೂಧಿಯಾನದಲ್ಲಿ ನಡೆದಿದೆ.
44 ವರ್ಷದ ರಂಜನಿ ಬಾಲಾ ಮಗನೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಾರೆ. ಇವರು 1989ರಲ್ಲಿ 9ನೇ ತರಗತಿ ಮುಗಿಸಿದ್ದರು. ಕೆಲವೊಂದು ತೊಂದರೆಗಳಿಂದ ಮುಂದಿನ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ. ಅದೇ ವೇಳೆ ರಂಜನಿ ಅವರು ಮದುವೆಯಾಗಿ ಸಂಸಾರಿಕ ಜೀವನದಲ್ಲಿ ಮಗ್ನರಾಗಿದ್ದರು.
Advertisement
Advertisement
ಈ ಹಿಂದೆ ಅನೇಕ ಸಲ ನನ್ನ ಪತಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಂಡಿದ್ದರು. ನಾನು ಮೂವರು ಮಕ್ಕಳ ತಾಯಿಯಾಗಿದ್ದ ಕಾರಣ ಪರೀಕ್ಷೆ ಬರೆಯಲು ಮನಸ್ಸು ಮಾಡಲಿಲ್ಲ. ನಾನು ಸಿವಿಲ್ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೀಗ ನನ್ನ ಮಗನೊಂದಿಗೆ ಸೇರಿ ಅಭ್ಯಾಸ ಮಾಡಿದ್ದೆ. ಆದ್ದರಿಂದ ಈ ಬಾರಿ ಆತನೊಂದಿಗೆ ಪರೀಕ್ಷೆ ಸಹ ಬರೆಯುತ್ತಿದ್ದೇನೆ ಎಂದು ರಂಜನಿ ಅವರು ಹೇಳಿದ್ದಾರೆ.
Advertisement
ನಾನು ಶಿಕ್ಷಣವನ್ನು ಮುಂದುವರೆಸಿ ಪದವಿ ಪೂರ್ಣಗೊಳಿಸುತ್ತೇನೆ. ಜೊತೆಗೆ ಹಿಂದಿ ಅಥವಾ ಯಾವುದೇ ವಿಷಯದಲ್ಲಿ ಪದವೀಧರೆಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಂಜನಿ ಅವರ ಈ ಕಾರ್ಯಕ್ಕೆ ಪತಿ, ಮಕ್ಕಳು, ಅತ್ತೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ.
Advertisement
Ludhiana: 44 yr old Rajni Bala is studying & appearing for class 10 exams with her son. Rajni says,'my husband motivated me to study. I am working as ward attendant in Civil Hospital & felt need to complete my class 10. Initially, felt odd going to school again but l'm happy now' pic.twitter.com/xa0DYR7MgU
— ANI (@ANI) March 28, 2018