ಇಸ್ಲಾಮಾಬಾದ್: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ಸೋದರ ಮುಫ್ತಿ ಅಬ್ದುರ್ ರವೂಫ್ ಮತ್ತು ಹಮಾದ್ ಅಜರ್ ಸೇರಿದಂತೆ ಒಟ್ಟು 44 ಉಗ್ರರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಮಂತ್ರಿ ಶೇರ್‍ಯಾರ್ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತ ಸಲ್ಲಿಸಿದ ಡೋಜಿಯರ್ ನಲ್ಲಿ ಮುಫ್ತಿ ಅಬ್ದುರ್ ರವೂಫ್ ಮತ್ತು ಹಮಾದ್ ಅಜರ್ ಹೆಸರು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸೇರಿದಂತೆ ಒಟ್ಟು 44 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇದೇ ಮಾದರಿಯ ಬೇರೆ ಸಂಘಟನೆ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದ್ದು, ಸಂಬಂಧಪಟ್ಟಂತೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ.
Advertisement
Pakistan's Dunya News: 44 members of banned outfits arrested, says Interior Ministry.
— ANI (@ANI) March 5, 2019
Advertisement
ಸೋಮವಾರ ಪಾಕಿಸ್ತಾನದ ಕಾನೂನಿನಲ್ಲಿ ಕೆಲ ಬದಲಾವಣೆ ತರಲಾಗಿತ್ತು. ಈ ಬದಲಾವಣೆಯ ಕಾನೂನಿನಲ್ಲಿ ಆಂತರಿಕ ಉಗ್ರರು ಮತ್ತು ಯುಎಎನ್ ಸೂಚಿಸಿದ ಉಗ್ರರು ಹಾಗು ನಿಷೇಧಿತ ಸಂಘಟನೆಗಳ ವಿರುದ್ಧ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ.
Advertisement
ಸರ್ಕಾರ ಈಗಾಗಲೇ ನಿಷೇಧಿತ ಎಲ್ಲ ಸಂಘಟನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪಾಕಿಸ್ತಾನ ಕಡೆಯಿಂದ 1948ರ ಸುರಕ್ಷಾ ಪರಿಷದ್ ಅಧಿನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಶೀಘ್ರದಲ್ಲಿಯೇ ಬದಲಾವಣೆಯ ಅಧಿನಿಯಮದಂತೆ ಭಯೋತ್ಪಾದಕ ನಿರ್ಮೂಲನೆ ಮತ್ತು ನಿಷೇಧಿತ ಸಂಘಟನೆಗಳ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಪಾಕಿಸ್ತಾನ ವಿದೇಶಿ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಜಲ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv