ಮೈಸೂರು: ಮುಡಾ ನಿವೇಶನ ವಿಚಾರದಲ್ಲಿ ಬಿಜೆಪಿ ಶಾಸಕ ಶ್ರೀವತ್ಸ (TS Srivatsa) ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ರದ್ದಾಗಬೇಕಿರೋದು 1,100 ಸೈಟ್ ಅಲ್ಲ. ಒಟ್ಟು 4,350 ಮುಡಾ ಸೈಟ್ ರದ್ದಾಗಬೇಕು ಎಂದು ಬಾಂಬ್ ಸಿಡಿಸಿದ್ದಾರೆ.
50:50 ಅನುಪಾತದಲ್ಲಿ 4,450 ಸೈಟ್‌ಗಳು ಹಂಚಿಕೆ ಆಗಿದೆ. 2019 ರಿಂದ 2024 ರ ವರೆಗೆ 4,450 ಸೈಟ್ ಹಂಚಿಕೆ ಆಗಿದ್ದು, ಈ ಎಲ್ಲ ಸೈಟ್‌ಗಳ ಹಂಚಿಕೆ ಅಕ್ರಮ ಎಂದು ಬಿಜೆಪಿ ಶಾಸಕ ಶ್ರೀವತ್ಸ ಆರೋಪಿಸಿದ್ದಾರೆ.

ಇನ್ನು ಸರ್ಕಾರ ಎಲ್ಲಾ ಸೈಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. 2019ರ ಅವಧಿಯಲ್ಲಿ ಸಿದ್ದರಾಮಯ್ಯ ಕುಟುಂಬಕ್ಕೆ 14 ಸೈಟ್ ಹಂಚಿಕೆಯಾಗಿದೆ. ಈ ಕಾರಣಕ್ಕೆ ತಮಗೆ ಸೈಟ್ ಕೊಟ್ಟ ಅಧಿಕಾರಿಗಳನ್ನು ಯತೀಂದ್ರ ಸಿದ್ದರಾಮಯ್ಯ ರಕ್ಷಿಸುತ್ತಿದ್ದಾರೆ ಎಂದಿದ್ದಾರೆ.
ಒಬ್ಬ ಅಧಿಕಾರಿಯ ರಕ್ಷಣೆಗೆ 3 ಸಾವಿರ ಅಕ್ರಮ ಸೈಟ್‌ಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣವೇ ಎಲ್ಲಾ ಸೈಟ್ ರದ್ದಾಗಬೇಕು. ಎಂದು ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ.

